ಅಭಿವೃದ್ಧಿ ಗಮನಿಸಿ ಮತ ನೀಡಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 24
ಮತದಾರರು ಪ್ರಜ್ಞಾವಂತರಾಗಿದ್ದು, ಕ್ಷೇತ್ರದ ಅಭಿವೃದ್ಧಿ ಗಮನಿಸಿ ಮತ ನೀಡುತ್ತಾರೆ ಎಂದು ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ಹೇಳಿದರು.
ತಾಲೂಕಿನ ನರೇಗಲ್ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಕೆಜೆಪಿ ಸೇರ್ಪಡೆ ಸಂದರ್ಭದಲ್ಲಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಮುಸ್ತಾಕಅಹ್ಮದ್ ನೆಗಳೂರ, ಅಬ್ದಲಖಾದರ ನೆಗಳೂರು, ನಜೀರಅಹ್ಮದ ನೆಗಳೂರ, ಗುಡಸಾಬ ನೆರೇಗಲ್ಲ, ಮಹ್ಮದಜಾಫರ ಜಮಾದಾರ, ಮಹ್ಮದಗೌಸ ನೆಗಳೂರ, ಜೈಲಾನಿ ನೆಗಳೂರ, ಮಹ್ಮದಹುಸೇನ ಅಗಸರ, ಮಹ್ಮದಸಾಧಿಕ ಹುಲಗೂರ, ಬಾಷಾಸಾಬ ಬಾಡ, ಅಬ್ದುಲಸಾಬ ನೆಗಳೂರ, ಮಹ್ಮದಗೌಸ ಲತಿಫನವರ, ಮಹಬೂಬಸಾಬ ಬಡಿಗೇರ, ಮಹ್ಮದಗೌಸ ದಿಡಗೂರ, ಮಹ್ಮದಸಾಬ ನೇಗಳೂರ, ನಿಸಾರಅಹ್ಮದ ನೆಗಳೂರ, ಮಹ್ಮದಸಾಧಿಕ ನೆಗಳೂರ, ಮಹ್ಮದಸಾಧಿಕ ಬಸನಕಟ್ಟಿ, ಮರ್ದಾನಸಾಬ ದೇವಗೇರಿ ಇತರರನ್ನು ಮಾಜಿ ಸಚಿವ ಸಿ.ಎಂ.ಉದಾಸಿ ಪಕ್ಷಕ್ಕೆ ಸ್ವಾಗತಿಸಿದರು.
ಕೆಜೆಪಿ ಮುಖಂಡರಾದ ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ಪದ್ಮನಾಭ ಕುಂದಾಪುರ, ಕಲ್ಯಾಣಕುಮಾರ ಶೆಟ್ಟರ, ಹಸಿನಾಭಿ ನಾಯ್ಕನವರ, ರಾಜು ಗೌಳಿ, ರವಿರಾಜ ಕಲಾಲ, ಭಾಸ್ಕರ ಹುಲಮನಿ, ಶಿವಪುತ್ರಪ್ಪ ಚಿಕ್ಕಣ್ಣನವರ, ಪ್ರವೀಣ ನವಲೆ, ಮಂಜುನಾಥ ಕಲಾಲ ಇದ್ದರು.