ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕೆಜೆಪಿ ಸೇರ್ಪಡೆ

Rashmi Kasaragodu
Updated On : 25 Apr 2013, 11:49 am

ಹಾನಗಲ್ಲ: ಕಂಚಿನೆಗಳೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ಸಿ.ಎಂ.ಉದಾಸಿ ಸಮ್ಮುಖದಲ್ಲಿ ಕೆಜೆಪಿ ಸೇರ್ಪಡೆಗೊಂಡರು. ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ, ತಾಲೂಕಿನಲ್ಲಿ ಅನುಷ್ಠಾನಗೊಂಡ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡು ವಿವಿಧ ಪಕ್ಷಗಳಿಂದ ಕಾರ್ಯಕರ್ತರು ಕೆಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಕಾರ್ಯಕರ್ತರ ಶ್ರಮ, ಜವಾಬ್ದಾರಿ ಪಕ್ಷದ ಗೆಲವಿಗೆ ಪ್ರಮುಖ ಪಾತ್ರ ವಹಿಸುವುದು ಎಂದರು. ಕಂಚಿನೆಗಳೂರಿನ ಆಬಾದಖಾನ ನಾಗರೊಳ್ಳಿ, ಸಾಧಿಕ ಚನ್ನಾಪುರ, ಮುಜಾಫರ ನಾಗರವಳ್ಳಿ, ಮಹ್ಮದಗೌಸ ತಹಸೀಲ್ದಾರ, ಅಲ್ತಾಪಹುಸೇನ ಎಣ್ಣಿ, ಫರೋಜಖಾನ ನಾಗರವಳ್ಳಿ, ಸಾಧಿಕ ಹೊಸಮನಿ, ಅಲಿಸಾಬ ಎಣ್ಣಿ, ಶೇಖ ಅಫಸರ ಚನ್ನಾಪುರ, ಖಾಜಾಮೆನುದ್ದಿನ ಇಟಗಿ, ಹಜರೇಸಾಬ ತಹಸೀಲ್ದಾರ, ಅಬ್ದುಲಖಾದರ ಎಣ್ಣಿ, ಮುಸ್ತಾಕಹ್ಮದ ಶೇಷಗಿರಿ, ಇಮಾಮಖಾನ ಹೊಂಡದ, ಮಖಬೂಲ ಚನ್ನಾಪುರ, ಮೈನು ಅರಳಿಮರದ, ಹಜರೇಸಾಬ ಯಳವಟ್ಟಿ, ಮಹಬೂಬಅಲಿ ಚನ್ನಾಪುರ, ಮರದಾನಸಾಬ ಡ್ವಾರಳ್ಳಿ, ಸಲೀಂ ಚನ್ನಾಪುರ, ಪುಟ್ಟಪ್ಪ ಕರ್ಜಗಿ ಅವರು ಕೆಜೆಪಿ ಸೇರಿದರು. ಕೆಜೆಪಿ ಮುಖಂಡರಾದ ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ಪದ್ಮನಾಭ ಕುಂದಾಪುರ, ಕಲ್ಯಾಣಕುಮಾರ ಶೆಟ್ಟರ, ಹಸಿನಾಭಿ ನಾಯ್ಕನವರ, ರಾಜು ಗೌಳಿ, ರವಿರಾಜ ಕಲಾಲ, ಭಾಸ್ಕರ ಹುಲಮನಿ, ಶಿವಪುತ್ರಪ್ಪ ಚಿಕ್ಕಣ್ಣನವರ, ಪ್ರವೀಣ ನವಲೆ, ಮಂಜುನಾಥ ಕಲಾಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement