ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಬಕಾರಿ ದಾಳಿ: 55 ಪ್ರಕರಣ ದಾಖಲು

Lingaraj Badiger
Updated On : 26 Apr 2013, 11:05 am

ಹಾವೇರಿ: ವಿಧಾನಸಭೆ ಚುನಾವಣೆ 2013ರ ನೀತಿ ಸಂಹಿತೆ ಜಾರಿಯಾದಾಗಿನಿಂದ ಮಾರ್ಚ್ 20ರಿಂದ 23, ಏಪ್ರಿಲ್ 2013ರ ವರೆಗೆ ಜಿಲ್ಲೆಯಲ್ಲಿ 357 ಕಡೆಗಳಲ್ಲಿ ಅಬಕಾರಿ ದಾಳಿ ನಡೆಸಲಾಗಿದ್ದು, 55 (26-ಘೋರ, 22-15ಎ, 7-ಬಿಎಸ್‌ಸಿ) ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಗಳಲ್ಲಿ ಒಟ್ಟು 46 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, 233.040 ಲೀಟರ್ ಮದ್ಯ, 14.860 ಲೀಟರ್ ಬೀರ್, 298 ಲೀಟರ್ ಕಳ್ಳಭಟ್ಟಿ ಹಾಗೂ 100 ಲೀಟರ್ ರಸಾಯನ ಜಪ್ತಿ ಮಾಡಲಾಗಿದೆ. 4 ದ್ವಿಚಕ್ರ ವಾಹನ, ಒಂದು ಆಟೋ ವಶಪಡಿಸಿಕೊಳ್ಳಲಾಗಿದ್ದು, ಎಲ್ಲಾ ಜಪ್ತಿ ಮಾಲಿನ ಮೌಲ್ಯ ಅಂದಾಜು ರು. 3,28,200ದ್ದಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement