ಗೆಲವು ನಮ್ಮದೆ: ಡಾ. ಸುಮಂಗಲಾ
ಶಿಗ್ಗಾಂವಿ: ಎಂಟು ದಿನದಿಂದ ಕ್ಷೇತ್ರವನ್ನು ಸುತ್ತುತ್ತಿದ್ದೇನೆ. ಜನತೆ ಐದು ವರ್ಷದಿಂದ ತಾವು ಅನುಭವಿಸಿದ ನೋವು ಸಂಕಟಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರೆಲ್ಲರಿಗೂ ನೀವು ನನ್ನನ್ನು ಆಯ್ಕೆ ಮಾಡಿದರೆ ಈ ಎಲ್ಲ ಬವಣೆಗಳನ್ನು ನೀಗಿಸುತ್ತೇನೆ ಎಂದು ಪ್ರಮಾಣ ಮಾಡಿದ್ದೇನೆ. ಜನರೂ ಜೆಡಿಎಸ್ಗೆ ಮತ ನೀಡುವುದಾಗಿ ಅಭಯ ನೀಡಿದ್ದಾರೆ. ಹೀಗಾಗಿ ಗೆಲವು ನಮ್ಮದೇ ಎಂದು ಡಾ. ಸುಮಂಗಲಾ ಮೈಸೂರು ಹೇಳಿದರು.
ಶಿಗ್ಗಾಂವಿ-ಸವಣೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ಸುಮಂಗಲಾ ಸವಣೂರಿನಲ್ಲಿ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಮತ ಯಾಚಿದರು. ಮಹಿಳಾ ಅಭ್ಯರ್ಥಿಯನ್ನು ತಮ್ಮ ಮನೆಯೊಳಕ್ಕೆ ಕರೆದೊಯ್ದು ಗೃಹಿಣಿಯರು ತಮ್ಮ ಕಷ್ಟಗಳನ್ನು ಹೇಳಿಕೊಂಡರು.
ಅದಕ್ಕೆ ಸ್ಪಂದಿಸಿದ ಡಾ. ಸುಮಂಗಲಾ ಈ ನಿಮ್ಮ ಕಷ್ಟಗಳಿಗೆಲ್ಲ ಮುಕ್ತಿ ಸಿಗುವ ಕಾಲ ಬಂದಿದೆ. ಜೆಡಿಎಸ್ ಬೆಂಬಲಸಿದರೆ ಈ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುತ್ತದೆ ಎಂದರು. ತುಂಬು ಹೃದಯದಿಂದ ನಮ್ಮ ಮತ ಜೆಡಿಎಸ್ಗೆ ಎಂದು ಘೋಷಿಸಿದರು.
ಪ್ರಕಾಶ ಬಾರಕೇರ, ರೆಡ್ಡಪ್ಪ ಬಸನಾಳ, ಅಕ್ಕಮ್ಮ ಅರಟಾಳ, ಮೀನಾಕ್ಷಿ ಬೋವಿ, ಈರಣ್ಣ ಬಸನಾಳ, ಬಸಣ್ಣ ಹಂಚಿನಮನಿ, ಮುಂತಾದವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.