ನಾಳೆಯಿಂದ ಮಾರುತಿ ದೇವರ ರಥೋತ್ಸವ
ಹಿರೇಕೆರೂರು: ಮಕರಿ ಗ್ರಾಮದಲ್ಲಿ ಮಾರುತಿ ದೇವರ ರಥೋತ್ಸವ ಪ್ರಾರಂಭವಾಗಿದ್ದು, 27ರ ವರೆಗೆ ಮತ್ತು 28ರಿಂದ ಮೇ 2ರ ವರೆಗೆ ದುರ್ಗಾದೇವಿ ಜಾತ್ರೋತ್ಸವ ಜರುಗಲಿದೆ.
ಏ. 25ರಂದು ಮಾರುತಿ ದೇವರ ದೊಡ್ಡ ತೇರು ಹಾಗೂ ವೀರಭದ್ರೇಶ್ವರ ದೇವರ ಗುಗ್ಗಳ ಜರುಗುವುದು. 26ರಂದು ಓಕುಳಿ ಕಾರ್ಯಕ್ರಮ, 27 ಮಧ್ಯಾಹ್ನ 1ರಿಂದ ಮಕರಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ, ಕಿರಿಗೇರಿ ಶ್ರೀ ಆಂಜನೇಯ ಸ್ವಾಮಿ, ದಂಡಗೀಹಳ್ಳಿಯ ಶ್ರೀ ಬಸವೇಶ್ವರ ಸ್ವಾಮಿಯ, ಮಕರಿಯ ಶ್ರೀ ಬೀರಲಿಂಗೇಶ್ವರ ಸ್ವಾಮೀಜಿ ಪಲ್ಲಕ್ಕಿ ಉತ್ಸವ ಜರುಗುವುದು.
ಜಾತ್ರಾ ಮಹೋತ್ಸವ: ಮಕರಿ ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಏ. 28ರಂದು ಸಾರ ಹಾಕುವುದು ಮತ್ತು ಕೂರಿಸಲಾಗುವುದು.
29ರಂದು ಶ್ರೀ ದೇವಿ ಪೂಜಾ ಕಾರ್ಯಕ್ರಮಗಳು, 30 ಬೆಳಗಿನ ಜಾವ ದೇವಿಯ ಪ್ರತಿಷ್ಠಾಪನೆ ಮತ್ತು ಸಂಜೆ ಉಡಿತುಂಬುವ ಕಾರ್ಯಕ್ರಮ, ಮೇ 1ರಂದು ಹುಲುಸು ಒಡೆಯುವುದು ಮತ್ತು ದೇವಿಗೆ ಪಡ್ಡಲಿಗೆ ತುಂಬಿಸುವುದು, 2ರಂದು ರಾತ್ರಿ 10ರಿಂದ ಗ್ರಾಮದ ಯುವಕರಿಂದ ಸೇಡಿನ ದುರಂತ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಮಕರಿ ಗ್ರಾಮದ ದೇವತಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.