ಉದಾಸಿ ಮತ ಯಾಚನೆ
ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ತಮ್ಮ ಕುಟುಂಬ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಪತ್ನಿ ನೀಲಮ್ಮ ಉದಾಸಿ, ಪುತ್ರಿ ಜಯಶ್ರೀ ತಿಳವಳ್ಳಿ, ಪುರಸಭಾ ಸದಸ್ಯೆ ಶೋಭಾ ಗವಳಿ, ಬಿ.ಎಸ್. ಅಕ್ಕಿವಳ್ಳಿ, ನಾಗರಾಜ ಕುಲಕರ್ಣಿ, ನಾಗರಾಜ ಕರೆಣ್ಣನವರ, ಸಿದ್ದರಾಮನಗೌಡ ಪಾಟೀಲ, ದಾನಪ್ಪ ಲಮಾಣಿ, ಈರಣ್ಣ ಗವಳಿ, ಅಶೋಕ ಹಂಗರಗಿ ಪಾಲ್ಗೊಂಡಿದ್ದರು.