ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕೆಜೆಪಿ, ಕಾಂಗ್ರೆಸ್‌ಗೆ ಮತದಾರರಿಂದ ತಕ್ಕಪಾಠ: ಬಳ್ಳಾರಿ

Mainashree
Updated On : 28 Apr 2013, 10:45 am

ಬ್ಯಾಡಗಿ: ಸ್ವಾರ್ಥಕ್ಕಾಗಿ ಹುಟ್ಟಿಕೊಂಡ ಕೆಜೆಪಿ ಹಾಗೂ 42 ವರ್ಷ ಅಧಿಕಾರಲ್ಲಿದ್ದೂ ದೇಶದಲ್ಲಿ ಇನ್ನೂ ಬಡತನ ಜೀವಂತವಾಗಿರುವಂತೆ ಮಾಡಿದ ಕಾಂಗ್ರೆಸ್ ಪಕ್ಷಗಳಿಗೆ ಮತದಾರ ತಕ್ಕಪಾಠ ಕಲಿಸಲಿದ್ದಾನೆ ಎಂದು ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಗುರುವಾರ ಚಿಕ್ಕಬಾಸೂರಲ್ಲಿ ಚುನಾವಣಾ ಪ್ರಚಾರ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯುಳ್ಳ ಬಿಜೆಪಿಯಿಂದ ಎಲ್ಲ ವರ್ಗದವರಿಗೂ ಸಮಾನ ಅವಕಾಶಗಳು ಸಿಕ್ಕಿವೆ ಎಂದರು.
ಬಿಜೆಪಿ 120ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಇದನ್ನು ತಡೆಯುವ ಪರ್ಯಾಯ ಪಕ್ಷ ಅಥವಾ ಶಕ್ತಿ ಇನ್ನೊಂದಿಲ್ಲ. ಪ್ರಜ್ಞಾವಂತ ಮತದಾರರು ಬಿಜೆಪಿಯನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಂದಿನ ಅವಧಿಯಲ್ಲಿ ರಾಜ್ಯದ ಜನರಿಗೆ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳಲಿದ್ದೇವೆ ಎಂದರು.
ಮುಖಂಡರಾದ ಜಯಣ್ಣ ಮಲ್ಲಿಗಾರ, ನಜೀರ್‌ಸಾಬ್ ಸವಣೂರ, ಖಾಶೀಮಸಾಬ ಸತಾರ್, ರಿಯಾಜ್ ಅಹ್ಮದ ಕಳಗೊಂಡ, ಲತೀಫ್‌ಸಾಬ ತಡಸದ, ರಸೂಲ್ಲಾಸಾಬ ಸವಣೂರ, ಇಸ್ಮಾಯಿಲ್ಲ ಮುಲ್ಲಾ, ಈರಪ್ಪ ಭೋವಿ ಲೋಕೆಶ್ ಲಮಾಣಿ ಸೇರಿದಂತೆ ನೂರಾರು ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement