ರಾಹುಲ್ ಬಗ್ಗೆ ಮಾತನಾಡಲು ಸುಷ್ಮಾಗೆ ನೈತಿಕತೆ ಇಲ್ಲ: ಸಿದ್ರಾಮಯ್ಯ
ಬಳ್ಳಾರಿ ರೆಡ್ಡಿ ಸೋದರರಿಗೆ ಗಣಿ ಹಗರಣಕ್ಕೆ ಸಹಕಾರ ನೀಡಿದ ಸುಷ್ಮಾ ಸ್ವರಾಜ್‌ಗೆ ರಾಹುಲ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ...
ಬ್ಯಾಡಗಿ: ಬಳ್ಳಾರಿ ರೆಡ್ಡಿ ಸೋದರರಿಗೆ ಗಣಿ ಹಗರಣಕ್ಕೆ ಸಹಕಾರ ನೀಡಿದ ಸುಷ್ಮಾ ಸ್ವರಾಜ್‌ಗೆ ರಾಹುಲ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಷ್ಮಾ ವರಮಹಾಲಕ್ಷ್ಮೀ ಪೂಜೆ ನೆಪದಲ್ಲಿ ಬಳ್ಳಾರಿಗೆ ಬಂದು ಗಣಿ ಕಪ್ಪ ಪಡೆದು ಹೋಗುತ್ತಿದ್ದುದನ್ನು ರಾಜ್ಯದ ಜನತೆ ಮರೆತಿಲ್ಲ. ಇಂಥವರಿಗೆ ರಾಹುಲ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳುವ ಮೂಲಕ ಶಿಗ್ಗಾಂವಿಯಲ್ಲಿ ಸುಷ್ಮಾ ಸ್ವರಾಜ್ ಅವರು ರಾಹುಲ್ ಗಾಂಧಿ ಭ್ರಷ್ಟಾಚಾರದ ಕುರಿತು ಮಾತನಾಡಿದ ಬಗ್ಗೆ 'ಭೂತದ ಬಾಯಿಯಲ್ಲಿ ಭಗವತ್ ಗೀತೆ ಹೇಳಿದ ಹಾಗೆ' ಎನ್ನುವ ಮಾತಿಗೆ ತಿರುಗೇಟು ನೀಡಿದರು.