ಅಕ್ರಮ ಮದ್ಯ: ಮಾಹಿತಿಗೆ ಸಾರ್ವಜನಿಕರಲ್ಲಿ ಮನವಿ
ಹಾವೇರಿ: ಮೇ 5ರಂದು ನಡೆಯಲಿರುವ ಕರ್ನಾಟಕ ವಿಧಾಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ದಾಸ್ತಾನು ಮತ್ತು ಕಳ್ಳಬಟ್ಟಿ ಸಾರಾಯಿ ತಯಾರಿಕೆ ಹಾಗೂ ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಅಕ್ರಮ ಮದ್ಯ ಸಾಗಾಟ, ಮಾರಾಟ, ದಾಸ್ತಾನು ಕಂಡುಬಂದಲ್ಲಿ ಕೂಡಲೇ ಹಾವೇರಿಯ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದ ವಿಶೇಷ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ (ಮೊ. 9449845032, ದೂ. 08375-233080) ಅಥವಾ ಪೊಲೀಸ್ ಉಪಾಧೀಕ್ಷಕರು, ಅಬಕಾರಿ ಜಾರಿ ಲಾಟರಿ ನಿಷೇಧ ವಿಭಾಗ, ಉತ್ತರ ವಲಯ ಬೆಳಗಾವಿ (ಮೊ. 9449845028), ಬೆಂಗಳೂರಿನ ಅಬಕಾರಿ ಜಾರಿ ಹಾಗೂ ಲಾಟರಿ ನಿಷೇಧ ವಿಭಾಗದ ಐಜಿಪಿ ಅವರ ಕಂಟ್ರೋಲ್ ರೂಮ್ (ಮೊ. 9449845066) ಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಲಾಗಿದೆ. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.