ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಭಿವೃದ್ಧಿಗೆ ಜನತೆ ಬೆಂಬಲ: ಬಾಪುಗೌಡ

Lingaraj Badiger
Updated On : 29 Apr 2013, 11:44 am

ಶಿಗ್ಗಾಂವಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕೆಜೆಪಿ ಪಕ್ಷದಿಂದ ಮಾತ್ರ ನಾಡಿನ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಹೀಗಾಗಿ ಜನತೆ ಅಭಿವೃದ್ಧಿ ಪರ ಯೋಜನೆ ಜಾರಿಗೆ ತಂದಿರುವ ಯಡಿಯೂರಪ್ಪನವರ ಕೆಜೆಪಿಗೆ ಬೆಂಬಲಿಸಲಿದ್ದಾರೆಂದು ಕೆಜೆಪಿ ಅಭ್ಯರ್ಥಿ ಬಾಪುಗೌಡ ಪಾಟೀಲ ಹೇಳಿದರು.
ತಾಲೂಕಿನ ತಡಸ ಗ್ರಾಮದಲ್ಲಿ ಕೆಜೆಪಿ ಪರ ಮನೆ-ಮನೆಗೆ ತೆರಳಿ ಮತ ಯಾಚನೆಗೆ ನಡೆಸಿದ ನಂತರ ಮಾತನಾಡಿ, ಕೆಜೆಪಿ ಪಕ್ಷ ಈ ಚುನಾವಣೆಯಲ್ಲಿ ಯಾರಿಗೂ ಬೆಂಬಲಿಸಿಲ್ಲ. ಸ್ವತಂತ್ರವಾಗಿ ಚುನಾವಣೆ ಸ್ಪರ್ಧೆ ಎದುರಿಸಲಿದೆ. ರಾಜ್ಯದಲ್ಲಿ ಹಿಂದೆ ಯಡಿಯೂರಪ್ಪ ಅವರು ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಂ.ಎನ್. ಬೊಮ್ಮನಹಳ್ಳಿ, ಉಮೇಶ ವೇರ್ಣೇಕರ, ವಿರೇಶ ನರೇಗಲ್, ದುರ್ಗವ್ವ ಹುಬ್ಬಳ್ಳಿ, ಈಸಾಕ್ ಮುಲ್ಲಾನವರ, ಅಲ್ತಫ್ ಮದರಸನವರ, ಸೋಮೇಶ ಜಡದಲಿ, ಪುಂಡಲಿಕ ಡಂಗರೋಜಿ, ಸುಜೀತ ಜೈನ್, ಕುಮಾರ ಉಂಕಿ, ನಟರಾಜ ದೇಸಾಯಿ, ರಾಜಶೇಖರ ಯಲಿಗಾರ, ಮಂಜು ಹೊಲ್ಯಾಳ, ಮಂಜು ಬಂಗಿ, ಷಣ್ಮುಖ ಅಂಗಡಿ, ಸಾಧೀಕ್ ಮನ್ನಂಗಿ, ನಾಗರಾಜ ಧನೋಜಿ, ಕಫೀಲ್ ಒಳಗೇರಿ, ರಮೇಶ ಆಲದಕಟ್ಟಿ, ರುದ್ರಗೌಡ್ರ ಪಾಟೀಲ, ಹೆಮರಡ್ಡಿ ರೆಡ್ಡೆರ, ಗುರುಶಾಂತಪ್ಪ ಪಾಟೀಲ, ಎನ್.ಬಿ. ಪಾಟೀಲ, ಮುತ್ತು ದಳವಾಯಿ ಪುಟ್ಟಪ್ಪ ಹಾನಗಲ್, ನಾಗಪ್ಪ ಕಡಕೋಳ, ಮುದಕಪ್ಪ ಕೂಡಲ, ಕಾರ್ಯಕರ್ತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement