ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜಾತ್ರೆ, ಸಂತೆ ಮುಂದೂಡಿಕೆ

Vishwanath S
Updated On : 1 May 2013, 11:25 am

ಹಾವೇರಿ:  ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 5ರಂದು ಮತದಾನ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು, ಈ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಸಂತೆ ಹಾಗೂ ಜಾತ್ರೆಗಳನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ.
  ಹಾನಗಲ್ಲ ತಾಲೂಕು ಕುಸನೂರು, ಶಿಗ್ಗಾಂವಿ ತಾಲೂಕು ಶಿಗ್ಗಾಂವಿ, ಕೋಣನಕೇರಿ ಹಾಗೂ ಹುಲಗೂರ, ಹಾವೇರಿಯ ಬಸವೇಶ್ವರ ನಗರ ಹಾಗೂ ದೇವಿಹೊಸೂರು, ಹಿರೇಕೆರೂರು ತಾಲೂಕು ಹಿರೇಕೆರೂರು, ಮಾಸೂರು ಮತ್ತು ರಾಣಿಬೆನ್ನೂರಲ್ಲಿ ಮೇ 5ರಂದು ಜರುಗುವ ಸಂತೆಗಳನ್ನು ಮುಂದೂಡಿ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement