ಹಾವೇರಿ

ಪ್ಯಾರಾಗ್ಲೈಡರ್ ಸೀಮಿತ ಹಾರಾಟ

ಹಾವೇರಿ:  ಮತದಾರರ ಜಾಗೃತಿಗಾಗಿ ಸೋಮವಾರ ನಗರದ ಆಕಾಶದಲ್ಲಿ ಸುತ್ತಾಡಿ, ಭಿತ್ತಿಪತ್ರಗಳ ಮಳೆ ಸುರಿಸಿ ಹಾವೇರಿ ನಾಗರಿಕರ ಕುತೂಹಲಕ್ಕೆ ಕಾರಣವಾಗಿದ್ದ ಪ್ಯಾರಾಗ್ಲೈಡರ್ ಮಂಗಳವಾರವೂ ಕೆಲಕಾಲ ಸುತ್ತಾಡಿ ಭಿತ್ತಿಪತ್ರ ಉದುರಿಸಿತು. ಬೆಳಗ್ಗೆ 6 ಗಂಟೆಯಿಂದ ಗಾಳಿ ಬೀಸುವ ವೇಗದಲ್ಲಿ ಏರಿಳಿತವಿದ್ದ ಕಾರಣ ಸ್ಥಿರ ವಾತಾವರಣ ಸಿಗದೆ ಹಾವೇರಿ ನಗರದ ಹೊರವಲಯದ ಗ್ರಾಮಗಳ ಮೇಲೆ ಹಾರಾಡುವುದು ಸಾಧ್ಯವಾಗಲಿಲ್ಲ. ಜಿಲ್ಲಾ ಕ್ರೀಡಾಂಗಣದಿಂದ ಮೇಲೆದ್ದ ಪ್ಯಾರಾ ಗ್ಲೈಡರ್ 16 ಕಿ.ಮೀ.ಗಳಷ್ಟು ಸುತ್ತಾಡಿ, ಕೆಳಗಿಳಿಯಿತು. ಪ್ಯಾರಾ ಗ್ಲೈಡರ್‌ಗೆ ಅನುಕೂಲಕರ ವಾತಾವರಣ ಇಲ್ಲದ ಕಾರಣ ಹಾರಾಟವನ್ನು ನಗರಕ್ಕೆ ಸೀಮಿತಗೊಳಿಸಲಾಯಿತೆಂದು ಪೈಲಟ್ ನಿಕೋಲೈಸಿಂಗ್ ಹೇಳಿದರು. ಮತದಾರರ ಜಾಗೃತಿ ಕಾರ್ಯಕ್ರಮ ಅನುಷ್ಠಾನದ ಮೇಲ್ವಿಚಾರಣೆಗೆ ನೇಮಕಗೊಂಡಿರುವ ವೀಕ್ಷಕರಾದ ಗಂಗಪ್ಪ, ಸಹ ವೀಕ್ಷಕರಾದ ನದೀಮ ತೂಫೈಲ್, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ವೆ. ಮುತ್ತುಕಾಮಾಚ್ಚಿ, ಮತದಾರ ಜಾಗೃತಿ ಕಾರ್ಯಕ್ರಮದ ಅನುಷ್ಠಾನ ಸಮಿತಿ ನೋಡಲ್ ಅಧಿಕಾರಿ ಸಿ.ಪಿ. ಮಾಯಾಚಾರಿ, ತಾಪಂ ಇಓ ಡಾ೤ ಬಸವರಾಜ ಡಿ.ಸಿ., ಮೇಘಾಲಯ ಪ್ಯಾರಾಗ್ಲೈಡರ್ ಅಸೋಷಯೇಷನ್‌ನ ವಾಸುಕಿ ಪ್ರಸಾದ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; ಎಲ್ಲರ ಮನಗೆದ್ದ US ಮ್ಯಾನೇಜರ್ ಪ್ರತಿಕ್ರಿಯೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT