ನೀರಲಗಿ ಕ್ಲಸ್ಟರ್ನಲ್ಲಿ ಕ್ಷೀರಭಾಗ್ಯಕ್ಕೆ ಚಾಲನೆ
ಶಿಗ್ಗಾಂವಿ: ತಾಲೂಕಿನ ನೀರಲಗಿ ಕ್ಲಸ್ಟರ್ ಮಟ್ಟದ ವನಹಳ್ಳಿ, ಗೋಟಗೊಡಿ, ಕಾಮನಹಳ್ಳಿ, ತಿಮ್ಮಾಪುರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಲು ವಿತರಿಸಿ ಕ್ಷೀರಭಾಗ್ಯ ಯೋಜನೆಗೆ ಬಿಆರ್ಪಿಯ ಡಿ.ಕೆ. ಪಾಟೀಲ ಚಾಲನೆ ನೀಡಿದರು. ಶಿಕ್ಷಣದಿಂದ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಶೈಕ್ಷಣಿಕ ಬಲವರ್ಧನೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರ್ಕಾರ ಅಕ್ಷರ ದಾಸೋಹ ಹಾಗೂ ಈಗ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ದೇಹ ಸದೃಢವಾಗಿದ್ದರೆ ಮಾತ್ರ ಎಲ್ಲ ಚಟುವಟಿಕೆಯಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳಲು ಸಾಧ್ಯ. ಇದನ್ನು ಮನಗಂಡು ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶವುಳ್ಳ ಹಾಲನ್ನು ವಿತರಿಸಲಾಗುತ್ತದೆ. ಶೈಕ್ಷಣಿಕ ಚಟುವಟಿಕೆ ಜತೆಗೆ ಸಾಂಘಿಕವಾಗಿ ಮಕ್ಕಳು ವಿಕಾಸಗೊಳ್ಳಲು ಮತ್ತು ಪ್ರತಿಭೆಯನ್ನು ಹೊರಹಾಕಲು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದರು.
ಸಿಆರ್ಪಿಯ ಸಿ.ವಿ. ದುಂಟಪ್ಪನವರ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.