ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 4 Aug 2013, 1:12 am

ಹಾವೇರಿ: ಮಳೆ ಕ್ಷೀಣ
ಹಾವೇರಿ: ಜಿಲ್ಲಾದ್ಯಂತ ಮಳೆ ಕ್ಷೀಣವಾಗಿದ್ದು, ಶನಿವಾರ ಸರಾಸರಿ 3.6 ಮೀ.ಮೀ. ಮಳೆಯಾಗಿದೆ. ಹಾವೇರಿ 4.6 ಮಿ.ಮೀ., ರಾಣಿಬೆನ್ನೂರು 0.8, ಹಿರೇಕೆರೂರು 3.2, ಸವಣೂರು 3.8, ಶಿಗ್ಗಾಂವಿ 3, ಹಾನಗಲ್‌ನಲ್ಲಿ 10 ಮಿ.ಮೀ. ಮಳೆ ಸುರಿದಿದೆ. ಬ್ಯಾಡಗಿಯಲ್ಲಿ ಮಳೆಯಾಗಿಲ್ಲ.
ಚಾಲನಾ ತರಬೇತಿ
ಹಾವೇರಿ: ಪ್ರಸಕ್ತ ಸಾಲಿನಲ್ಲಿ ಸರ್ಕಾರದ ವಿಶೇಷ ಘಟಕ ಯೋಜನೆಯಡಿ ಆಟೋರಿಕ್ಷಾ, ಲಘು ವಾಹನ ಹಾಗೂ ಭಾರಿ ವಾಹನ ಚಾಲನಾ ತರಬೇತಿ ನೀಡಲು ಎಸ್‌ಸಿ (ಪರಿಶಿಷ್ಟ ಜಾತಿ) ಅಭ್ಯರ್ಥಿಗಳಿಂದ ಆ. 30ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿಗೆ ತಗಲುವ ವೆಚ್ಚದ ಶೇ. 25ರಷ್ಟು ವೆಚ್ಚವನ್ನು ಅಭ್ಯರ್ಥಿಗಳು ಭರಿಸಬೇಕು. ಉಳಿದ ವೆಚ್ಚವನ್ನು ಸಾರಿಗೆ ಇಲಾಖೆ ಭರಿಸುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಎಂ. ಬಲವಳ್ಳಿ ತಿಳಿಸಿದ್ದಾರೆ. ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು (ದೂ. 08375-232299) ಸಂಪರ್ಕಿಸಿ.
ಉದ್ಯಮಶೀಲತಾ ತರಬೇತಿ ಹೊಂದಿ: ಶ್ರೀ
ಹಾವೇರಿ: ಜಲಾನಯನ ಯೋಜನೆಯಡಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಇಂಥ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅಗಡಿಯ ಅಕ್ಕಿಮಠದ ಗುರುಲಿಂಗದೇವರು ನುಡಿದರು. ಅಗಡಿ ಗ್ರಾಮದಲ್ಲಿ ಜಿಪಂ, ಜಿಲ್ಲಾ ಮತ್ತು ತಾಲೂಕು ಜಲಾನಯನ ಅಭಿವೃದ್ಧಿ ಇಲಾಖೆ, ನವೋದಯ ಶಿಕ್ಷಣ ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್) ಹಾಗೂ ನವಚೇತನ ಪ್ರತಿಷ್ಠಾನದ ಆಶ್ರಯದಲ್ಲಿ ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮ ಐಡಬ್ಲೂಎಂಪಿ ಎರಡನೇ ತಂಡದಲ್ಲಿ ಅಗಡಿ ಉಪಜಲಾನಯನ ವ್ಯಾಪ್ತಿಯ ಕರಜಗಿ ಗ್ರಾಮದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಉದ್ಯಮಶೀಲತಾ ಜಾಗೃತಿ ತರಬೇತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಮಾಜದಲ್ಲಿ ಕೃಷಿಕ, ರಕ್ಷಕ ಹಾಗೂ ಶಿಕ್ಷಕ ಈ ಮೂವರ ಪಾತ್ರ ಪ್ರಮುಖವಾಗಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಂದುವರಿಯಲು ಸಂಘಟನೆಗಳು ಅವಶ್ಯ ಎಂದರು. ಶ್ರೀ ಪ್ಯಾಟಿಮಠ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಪ್ರಬಣ್ಣ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ರತ್ನಾ ವಿರಕ್ತಮಠ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ಅಧಿಕಾರಿ ಎಸ್.ಟಿ. ಬೆಳ್ಳೇರಿ ಹಾಗೂ ನವಚೇತನ ಫೌಂಡೇಶನ್‌ನ ಆನಂದ ಎಫ್.ಬಿ. ಅತಿಥಿಗಳಾಗಿದ್ದರು. ಮಂಜುನಾಥ ಎಸ್.ಎ. ಸ್ವಾಗತಿಸಿದರು. ತಿಪ್ಪೇಶ ಕನ್ನಮ್ಮನವರ ನಿರೂಪಿಸಿದರು. ನೀಡ್ಸ್ ಸಂಸ್ಥೆ, ನವಚೇತನ ಫೌಂಡೇಶನ್ ಸಿಬ್ಬಂದಿ, ಪ್ರದೀಪ ಹಿತ್ತಲಮನಿ, ಶಂಕ್ರಯ್ಯ ಸಂದಿಮಠ ಸದಸ್ಯರು ಇದ್ದರು.
ಟಾಂಗಾ ಕೂಟ: ನಿಷೇಧಾಜ್ಞೆ
ಹಾವೇರಿ: ರಾಣಿಬೆನ್ನೂರು ನಗರದಲ್ಲಿ ಶಾಂತಿ-ಸುವ್ಯವಸ್ಥೆ ಹಾಗೂ ಕೋಮು ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ನಗರದ ಮಧ್ಯ ಭಾಗದಲ್ಲಿರುವ ಟಾಂಗಾಕೂಟದ ಬಯಲು ಜಾಗೆಯಲ್ಲಿ ಯಾವುದೇ ಸಭೆ-ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಿ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಸೆ. 30ರ ವರೆಗೂ ಮುಂದುವರಿಸಿ ಜಿಲ್ಲಾ ದಂಡಾಧಿಕಾರಿ ಪಾಂಡುರಂಗ ನಾಯ್ಕ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement