ಸುದ್ದಿ ಸಂಕ್ಷೇಪ
ಸಿಆರ್‌ಪಿ ಅಮಾನತು
ರಾಣಿಬೆನ್ನೂರು: ಕರ್ತವ್ಯ ಲೋಪದ ಕಾರಣ ಮೇಡ್ಲೆರಿ ಸಿಆರ್‌ಪಿ ಹಾಗೂ ಶಿಕ್ಷಕ ಎಸ್.ಡಿ. ಕುರುಬರ ಅವರನ್ನು ಅಮಾನತು ಮಾಡಿದ್ದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಲಕ್ಷ್ಮಣ ತಿಳಿಸಿದ್ದಾರೆ. ಉಪ ನಿರ್ದೇಶಕರ ಆದೇಶದ ಮೇರೆಗೆ ಮೇ 15ರಂದು ಕಾರಣ ಕೇಳಿ ನೀಡಿದ ನೋಟಿಸ್‌ಗೆ ಹಾಗೂ ಜು. 16ರಂದು ಕಚೇರಿಗೆ ಕರೆಯಿಸಿ ವಿಚಾರಿಸಿದಾಗಲೂ ಕುರುಬರ ಸಮಂಜಸ ಉತ್ತರ ನೀಡಿಲ್ಲ. ವಿಚಾರಣೆ ಕಾಯ್ದಿರಿಸಿ, ಕುರುಬರ ಅವರನ್ನು ಅಮಾನತು ಮಾಡಲಾಗಿದೆ.
ಕೃಷಿ ಉಪಕರಣ ಲಭ್ಯ
ಹಾವೇರಿ: ರೈತರು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಟ್ರ್ಯಾಕ್ಟರ್ ಅಥವಾ ಎತ್ತು ಚಾಲಿತ ಕೃಷಿ ಉಪಕರ ಪಡೆಯಲು ಅರ್ಜಿ ಸಲ್ಲಿಸಬಹುದು. ತುಂತುರು ನೀರಾವರಿ ಘಟಕ, ಹನಿ ನೀರಾವರಿ ಘಟಕ, ಎಂ.ಬಿ. ಪ್ಲೋ, ಕಲ್ಟಿವೇಟರ್, ನೇಗಿಲು, ಬಿತ್ತನೆ ಕೂರಿಗೆ, ಕೇಜವಿಲ್, ರೋಟಾವೇಟರ್, ಮೇವು ಕತ್ತರಿಸುವ ಯಂತ್ರಗಳು ಸಿಗಲಿವೆ. ಮಾಹಿತಿಗೆ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ - ಹಾವೇರಿ (ಮೊ. 7259005495), ಗುತ್ತಲ (ಮೊ. 7259005493) ಹಾಗೂ ಕರ್ಜಗಿ (ಮೊ. 7259005500).