ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿನೂತನ ಆಹಾರ ಪ್ರಯೋಗ: ಇಡ್ಲಿ-ಸಾಂಬಾರ್ ವಿತರಣೆ

Vishwanath S
Updated On : 5 Aug 2013, 12:16 pm

ಶಿಗ್ಗಾಂವಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಅನೇಕ ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಕ್ಕಳ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ತಾಲೂಕು ಅಕ್ಷರ ದಾಸೋಹ ಅಧಿಕಾರಿ ರವಿ ಶೆಟ್ಟೆಪ್ಪನವರ ಹೇಳಿದರು.
ಪಟ್ಟಣದ ಫಕ್ಕೀರಮ್ಮ ಮಂತ್ರೋಡಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶನಿವಾರ ವಿನೂತನ ಆಹಾರ ಪ್ರಯೋಗದಡಿ ವಿದ್ಯಾರ್ಥಿಗಳಿಗೆ ಇಡ್ಲಿ, ಸಾಂಬಾರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಅಕ್ಷರ ದಾಸೋಹದ ಬಿಸಿಯೂಟದಲ್ಲಿ ಅನ್ನ, ಸಾರು ಹಾಗೂ ಪಲಾವು ನೀಡುವ ಜತೆಗೆ ವಾರದಲ್ಲಿ ಒಂದು ದಿನ ವಿಶೇಷ ಆಹಾರ ನೀಡುವತ್ತ ಶಿಕ್ಷಕರು ಗಮನ ಹರಿಸಬೇಕು. ಅಂದಾಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶೈಕ್ಷಣಿಕವಾಗಿ ಬದಲಾವಣೆ ತರಲು ಸಾಧ್ಯ ಎಂದರು.
ನೂತನವಾಗಿ ಪ್ರಾರಂಭವಾದ ಮಹತ್ವಾಕಾಂಕ್ಷಿ ಕ್ಷೀರಭಾಗ್ಯ ಯೋಜನೆಯ ಲಾಭವನ್ನ 29938 ವಿದ್ಯಾರ್ಥಿಗಳು ಪಡೆಯಲಿದ್ದಾರೆ. 135 ಶಾಲೆಗಳಲ್ಲಿ ಯೋಜನೆ ಅಧಿಕೃತವಾಗಿ ಚಾಲನೆ ಪಡೆದಿದ್ದು, ಖಾಸಗಿ ಸಂಸ್ಥೆಗಳಿಂದ ಆಹಾರ ಪಡೆಯುವ ಒಪ್ಪಂದ ಮಾಡಿಕೊಂಡಿರುವ 36 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಹಾಲು ವಿತರಣೆ ಮಾಡುತ್ತಿಲ್ಲ. ಎನ್‌ಜಿಓಗಳು ಆವಶ್ಯಕ ಸಾಮಗ್ರಿ ಮತ್ತು ಇತರ ವ್ಯವಸ್ಥೆ ಸರಿಪಡಿಸಿಕೊಳ್ಳಲು ಕೆಲ ದಿನಗಳ ಕಾಲಾವಕಾಶ ಕೇಳಿವೆ. ಹೀಗಾಗಿ ಯೋಜನೆಯ ಲಾಭ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಿಸುವ ನಿಟ್ಟಿನಲ್ಲಿ ಹಾಲು ನೀಡದ ಶಾಲೆಗಳಿಗೆ ಹತ್ತಿರದ ಇನ್ನೊಂದು ಹಾಲು ವಿತರಿಸುವ ಶಾಲೆಯಿಂದ ಸಿದ್ಧಪಡಿಸಿದ ಹಾಲನ್ನು ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ತಿಂಗಳೂ 8.50 ಟನ್ ಹಾಲಿನ ಪುಡಿ ಅವಶ್ಯವಿದ್ದು, ಸದ್ಯ ಒಂದು ಟನ್ ಪೂರೈಕೆಯಾಗಿದೆ ಎಂದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಿ.ಪಿ. ಕರೂರ, ಶಿಕ್ಷಕರಾದ ಐ.ಕೆ. ಹಸಬಿ, ವಿ.ಎನ್. ಮುದಿಗೌಡರ, ಎನ್.ಜಿ. ಬನ್ನಿಮಟ್ಟಿ, ಎಸ್.ಎಸ್. ಪಾಟೀಲ, ಬಿ.ಎಫ್. ಬಡ್ಡಿ, ಶಿಕ್ಷಕಿ ಎಸ್.ಎಸ್. ಕಾಮನಳ್ಳಿ, ಎಸ್.ವಿ. ಅಂಗಡಿ, ಗುಮಾಸ್ತ ಎಂ.ಸಿ. ಹಿರೇಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement