ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಚಳಗೇರಿ ಶಾಲೆಯಲ್ಲಿ ಕ್ಷೀರಭಾಗ್ಯಕ್ಕೆ ಚಾಲನೆ

Lingaraj Badiger
Updated On : 6 Aug 2013, 11:52 am

ರಾಣಿಬೆನ್ನೂರು: ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಸರ್ಕಾರ ಶಾಲೆಯ ಮಕ್ಕಳಿಗೆ ವಾರದ 3 ದಿನಗಳಲ್ಲಿ, ಉತ್ತಮ ರುಚಿಭರಿತ ಹಾಲನ್ನು ವಿತರಿಸುತ್ತಿದ್ದು, ಪಾಲಕರು ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಲು ಮುಂದಾಗಬೇಕೆಂದು ಚಳಗೇರಿ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಪ್ರಧಾನ ಗುರು ಎಲ್.ಬಿ. ಬಡಿಗೇರ ಹೇಳಿದರು.
ಸೋಮವಾರ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಯಲ್ಲಿ 150 ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ರಾಜ್ಯದ ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಓದುವ ಬಡವರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಲಾಭ ಪಡೆಯಲು ಮಕ್ಕಳು ಹಾಗೂ ಪಾಲಕರು ಮುಂದಾಗಬೇಕು ಎಂದರು.
ಸಹ ಶಿಕ್ಷಕಿಯರಾದ ಬಿ.ಎಂ. ಉಮಾದೇವಿ ಹಾಗೂ ಎಸ್.ಎಚ್. ಶೇಖ ಮಾತನಾಡಿದರು. ಶಿಕ್ಷಕರಾದ ಬಿ.ವೈ. ಹುಕ್ಕೇರಿ, ಎಸ್.ಎಸ್. ಕಾಯಕದ, ಸಿಬ್ಬಂದಿ ಚಂದ್ರಶೇಖರ ಕೊಪ್ಪದ, ಸುಶೀಲವ್ವ ಹಾಗೂ ಹನುಮಕ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement