ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಮರ್ಪಕ ಬಸ್‌ಗೆ ಆಗ್ರಹಿಸಿ ನಿಲ್ದಾಣಾಧಿಕಾರಿಗೆ ಪತ್ರ

Lingaraj Badiger
Updated On : 6 Aug 2013, 11:52 am

ರಾಣಿಬೆನ್ನೂರು: ತಾಲೂಕಿನ ನದಿಹರಳಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸಮಯಕ್ಕೆ ಸರಿಯಾಗಿ ಬಸ್ ಓಡಿಸಬೇಕೆಂದು ವಿನಂತಿಸಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಣಿಬೆನ್ನೂರು ಮತ್ತು ಹರಿಹರ ನಿಲ್ದಾಣಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಾಲೂಕು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜಗದೀಶಗೌಡ ಹಾಲನಗೌಡ ಕೋಟೇಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲೂಕು ಕೇಂದ್ರ ಸ್ಧಾನದಿಂದ 30 ಕಿ.ಮೀ. ಹಾಗೂ ಹರಿಹರದಿಂದ 25 ಕಿ.ಮೀ. ಅಂತರದಲ್ಲಿರುವ ತಾಲೂಕಿನ ನದಿಹರಳಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಾದ ಡೇರಾಯನಹಳ್ಳಿ, ಹುಲಿಕಟ್ಟಿ, ಐರಣಿ, ಆರೇಮಲ್ಲಾಪುರ, ಹಿರೇಬಿದರಿ, ಬೇಲೂರು, ಅಂಕಸಾಪುರ, ಹಿಲದಹಳ್ಳಿಯಿಂದ ನಿತ್ಯ ರಾಣಿಬೆನ್ನೂರು ಮತ್ತು ಹರಿಹರ ಕಾಲೇಜುಗಳಿಗೆ ಶಿಕ್ಷಣ ಪಡೆಯುವುದಕ್ಕಾಗಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಓಡಾಡುತ್ತಾರೆ. ಆದರೆ, ರಾಣಿಬೆನ್ನೂರು ಹಾಗೂ ಹರಿಹರದಿಂದ ಸರಿಯಾದ ಸಮಯಕ್ಕೆ ಬಸ್ ಬಾರದೆ ತೊಂದರೆಯಾಗಿದೆ. ಈ ಹಳ್ಳಿಗಳಿಗೆ ಸೂಕ್ತ ಬಸ್ ಸೌಕರ್ಯ ಕಲ್ಪಿಸುವಂತೆ ರಾಣಿಬೆನ್ನೂರು ಮತ್ತು ಹರಿಹರ ಬಸ್ ನಿಲ್ದಾಣಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement