ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪ್ರತಿಭೆ, ಶ್ರಮ. ಶ್ರದ್ಧೆ ಸದ್ಬಳಕೆಯಾಗಲಿ: ನಾಗರಾಜ

Vishwanath S
Updated On : 7 Aug 2013, 11:04 am

ಶಿಗ್ಗಾಂವಿ: ಬದುಕಿನ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಯುವಕರು ಕ್ರಿಯಾಶೀಲತೆ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ತಮ್ಮ ಪ್ರತಿಭೆ, ಶ್ರದ್ಧೆ, ಶ್ರಮ ಸದುಪಯೋಗ ಮಾಡಿಕೊಳ್ಳಬೇಕು ಎಂದು ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ತಿಳಿಸಿದರು.
ಶ್ರೀ ಚನ್ನಪ್ಪ ಕುನ್ನೂರ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ, ಭವಿಷ್ಯದ ದಿನಗಳು ಸ್ಪರ್ಧಾತ್ಮಕವಾಗಿವೆ. ದುಡಿಮೆಗೆ ತಕ್ಕ ಪ್ರತಿಫಲ ನೀಡುವ ಕಾಲ ಆರಂಭವಾಗಿದೆ. ದುಡಿಯುವ ಪ್ರತಿಭಾವಂತ, ಶ್ರಮವಂತರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳು ಖಾಸಗಿ ವಲಯದಲ್ಲಿವೆ. ಬದುಕಿಗಾಗಿ ಅಗತ್ಯವಿರುವ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಿ ಎಂದರು.
ಮಂಗಳೂರಿನ ಸ್ಮಾಲ್ ಗ್ರೂಫ್ ಆಫ್ ಇನ್‌ಸ್ಟಿಟ್ಯೂಟ್‌ನ ಇಓ ಕೆ. ಪುಷ್ಪರಾಜ್, ಭಾರತೀಯರಲ್ಲಿರುವ ವಿದ್ಯೆ ಆಲಸ್ಯದಿಂದಾಗಿ ಪೋಲಾಗುತ್ತಿದೆ. ಸಾಮಾಜಿಕ ಜೀವನ ಮಾನವೀಯ ಮೌಲ್ಯಗಳನ್ನು ತ್ಯಜಿಸುತ್ತಿದೆ. ಇಂಥದರಲ್ಲಿಯೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಸೃಜನಶೀಲವಾಗಿ ನಮ್ಮ ಬದುಕು ರೂಪಿಸಿಕೊಳ್ಳುವ ಅಗತ್ಯವಿದೆ. ಬದುಕಿಗೆ ಸುಂದರ ಕನಸುಗಳಿರಬೇಕು, ಅದರ ಸಾಕಾರಕ್ಕೆ ಶ್ರಮ ಬೇಕು. ಆದರ್ಶ ವ್ಯಕ್ತಿತ್ವ ನಮ್ಮದಾಗಬೇಕು. ಉಪಕರಿಸಿದವರನ್ನು ಮರೆಯದಿರಿ, ಉಪಕಾರ ಮಾಡುವ ಮನೋಬಲ, ಆಸಕ್ತಿ ನಿಮ್ಮದಾಗಿರಲಿ ಎಂದರು.
ಉಪನ್ಯಾಸಕರಾದ ಕೆ. ಬಸಣ್ಣ, ಕೆ.ಎಸ್. ಬರದೆಲಿ, ಎಂ.ಎಸ್. ಕುರಂದವಾಡ, ಕೆ.ಸಿ. ಹೂಗಾರ, ಆರ್.ಜಿ. ಹಿರೇಮಠ, ಸೌಮ್ಯಾ ಹುತ್ತನಗೌಡ್ರ ಸಾಂದರ್ಭಿಕವಾಗಿ ಮಾತನಾಡಿದರು, ಯಶೋದಾ ಜಿರಾಳ ಸ್ವಾಗತಿಸಿದರು, ವೀಣಾ ಚವಟೇರ ನಿರೂಪಿಸಿದರು, ಕಿರಣ ಕಾರಡಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement