ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾನಗಲ್ಲ: ಶಾಲೆಗಳಲ್ಲಿ ಕ್ಷೀರಭಾಗ್ಯ ಸುಸೂತ್ರ

Vishwanath S
Updated On : 7 Aug 2013, 11:04 am

ಹಾನಗಲ್ಲ: ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ರಮ ಸರಳವಾಗಿ ಆರಂಭವಾಯಿತು.
ತಾಲೂಕಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಹಾಲು ಸಿದ್ಧಪಡಿಸಿ ವಿತರಿಸಲು ಶಾಲೆಗಳಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಪಾತ್ರೆಗಳನ್ನು ಹಾಗೂ ಬೇಕಾಗುವ ಸಕ್ಕರೆಯನ್ನು ಮಾರುಕಟ್ಟೆಯಲ್ಲಿ ಕೊಳ್ಳಲಾಗಿದೆ.  ಬಿಸಿಯೂಟ ತಯಾರಿಕೆಯ ಗ್ಯಾಸ್ ಸಿಲಿಂಡರ್ ಇದ್ದು, ಆ ಸಿಬ್ಬಂದಿಯೇ ಹಾಲು ಸಿದ್ಧಪಡಿಸುತ್ತಿದ್ದಾರೆ.
ಮಕ್ಕಳು ಹಾಲು ಕುಡಿಯಲು ಲೋಟಗಳನ್ನು ತಾವೇ ತರುತ್ತಿದ್ದಾರೆ. 25 ಕೆಜಿ ಚೀಲಗಳಲ್ಲಿ ಕೆಎಂಎಫ್ ನಂದಿನಿ ಹಾಲಿನ ಪುಡಿ ಪೂರೈಸುತ್ತಿದೆ. ತಾಲೂಕಿನ ಎಲ್ಲ ಶಾಲೆಗಳಿಗೆ ಎರಡು ದಿನಗಳಿಗೆ ಸಾಕಷ್ಟು, ಅಂದರೆ, ಸದ್ಯ 25 ಕೆಜಿಯ 40 ಚೀಲಗಳು ಪೂರೈಕೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇಡಿಕೆ
ಹಾನಗಲ್ಲಿನ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಲು ವಿತರಣೆ ಸಮಸ್ಯೆಯಿಲ್ಲದೆ ನಡೆಯುತ್ತಿದೆ. ಪುಡಿಯನ್ನು 25 ಕೆಜಿ ಚೀಲಗಳ ಬದಲು ಒಂದು ಕೆಜಿ ಪ್ಯಾಕೆಟ್‌ಗಳಲ್ಲಿ ಪೂರೈಸಿದರೆ ಹೆಚ್ಚು ತಾಜಾ ಆಗಿ ಉಳಿಯುತ್ತದೆ. ಅಲ್ಲದೆ ಎನ್‌ಜಿಓಗಳು ಶಾಲೆಗಳಿಗೇ ನೇರವಾಗಿ ಹಾಲಿನ ಪುಡಿ ತಲುಪಿಸಿದರೆ ವ್ಯವಸ್ಥೆ ಸರಳವಾಗುತ್ತದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಸಿ.ಐ. ಕುನ್ನೂರ ಸಲಹೆ ನೀಡಿದರು. ಹಾಲು ವಿತರಣೆ ಆರಂಭವಾದಲ್ಲಿಂದ ಮಕ್ಕಳ ಹಾಜರಾತಿ ಹೆಚ್ಚಿದೆ ಎಂದರು.
ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಲು ವಿತರಣೆ ಆರಂಭಿಸುವ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಜೆ.ಪಿ. ದೇವಗಿರಿ, ಸದಸ್ಯ ಕಾಂತೇಶ ಬಾಬಜಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಎ.ವಿ. ಹನುಮಾಪುರ, ಶಿಕ್ಷಣ ಸಂಯೋಜಕ ಎ.ಆರ್. ಪ್ರಾಣೇಶರಾವ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement