ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಜೆಪಿ ಕಾರ್ಯದರ್ಶಿಯಾಗಿ ದೊಡ್ಮನಿ

Vishwanath S
Updated On : 11 Aug 2013, 11:54 am

ಬ್ಯಾಡಗಿ: ಬಿಜೆಪಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ದೊಡ್ಮನಿ ಆಯ್ಕೆಯಾಗಿದ್ದಾರೆ. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷ ರಾಮಣ್ಣ ಉಕ್ಕುಂದ ಈ ಆಯ್ಕೆ ಘೋಷಿಸಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿರುವ ನನಗೆ ಸ್ಥಾನ ದೊರಕಿದ್ದು ಅತೀವ ಸಂತಸ ತಂದಿದೆ. ಬಿಜೆಪಿಯನ್ನು ಗ್ರಾಮೀಣ ಪ್ರದೇಶದಲ್ಲಿ ಸಂಘಟಿಸುವ ಮೂಲಕ ಮುಂದೆ ಅಧಿಕಾರಕ್ಕೆ ತರುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ದೊಡ್ಮನಿ ತಿಳಿಸಿದರು. ಸಭೆಯಲ್ಲಿ ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ತಾಪಂ ಉಪಾಧ್ಯಕ್ಷ ಚಂದ್ರಪ್ಪ ಮುಚ್ಚಟ್ಟಿ, ಮುಖಂಡರಾದ ಸಿ.ಆರ್. ಆಲದಗೇರಿ, ಶಂಕರಗೌಡ ಪಾಟೀಲ, ಮೌನೇಶ ಅರ್ಕಾಚಾರಿ, ಜಿತೇಂದ್ರ ಸುಣಗಾರ, ವಿಷ್ಣುಕಾಂತ ಬೆನ್ನೂರು, ಷಣ್ಮುಖಪ್ಪ ಅಜಗೊಂಡ್ರ, ವೀರಭದ್ರಪ್ಪ ಹೊಮ್ಮರಡಿ, ವೀರೇಂದ್ರ ಶೆಟ್ಟರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement