ಗದಗ ಛಾಯಾಗ್ರಾಹಕರ ಸಂಘಕ್ಕೆ ಗುರಿಕಾರ ಆಯ್ಕೆ
ಗದಗ: ಗದಗ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಎಸ್.ಎಸ್. ಗೌಡರ, ಗೌರವಾಧ್ಯಕ್ಷ ಬಿ. ಬಾಬು, ಉಪಾಧ್ಯಕ್ಷ ದಿಲೀಪ ಮುಂಡರಗಿ, ಕಾರ್ಯದರ್ಶಿ ಶಂಕರ ಗುರಿಕಾರ, ಸಹಕಾರ್ಯದರ್ಶಿ ಮಹೇಶ ಬಡಿಗೇರ, ಖಜಾಂಚಿ ವಾದಿರಾಜ ಕುಲಕರ್ಣಿ, ಸಹಖಜಾಂಚಿ ಹನುಮಂತಸಾ ಮಿಸ್ಕಿನ್, ಸಂಘಟನಾ ಕಾರ್ಯದರ್ಶಿ ಜಲಾಶಂಕರ ಶಿದ್ಲಿಂಗ್, ಸಹಸಂಘಟನಾ ಕಾರ್ಯದರ್ಶಿ ಸಿ.ಎಸ್. ದೇವರಮನಿ ಹಾಗೂ ನಿರ್ದೇಶಕರಾಗಿ ಆತ್ಮಾನಂದ ಜುಜಾರೆ, ಸುನೀಲ ನಾಗಠಾಣ, ಭಗೀರಥ ಮಲಜಿ, ಕಾಶೀನಾಥಸಾ ಕಲಬುರ್ಗಿ, ವಿರೂಪಾಕ್ಷ ಅರಳಿ, ಶರಣಪ್ಪ ಮಡಿವಾಳರ, ನಾಗಭೂಷಣ ಹವಳದ, ವಿನಯ ಮುಂಡರಗಿ, ಶಂಕರ ವಡ್ಡಿನ, ಮಂಜುನಾಥಸಾ ಕಬಾಡಿ, ಬಿ.ಎ. ಪಲ್ಲೇದ, ಮಂಜುನಾಥ ಲಕ್ಷೇಟ್ಟಿ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಜಿಲ್ಲೆ, ತಾಲೂಕು ಛಾಯಾಗ್ರಾಹಕರು ಪಾಲ್ಗೊಂಡಿದ್ದರು.
ಇಂದು 2132ನೇ ಶಿವಾನುಭವ
ಗದಗ: ನಗರದ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘ, ಎಸ್.ಎಸ್. ಪಾಟೀಲ ಪ್ರತಿಷ್ಠಾನ ಕಲಕೇರಿ 2132ನೇ ಶಿವಾನುಭವ ಹಾಗೂ ಮಾಜಿ ಸಚಿವ ಎಸ್.ಎಸ್. ಪಾಟೀಲರ 79ನೇ ಜನ್ಮದಿನಾಚರಣೆ ಹಾಗೂ ಮುಂಡರಗಿ ನಿಮಾತೃಗಳಲ್ಲಿ ಒಬ್ಬರಾದ ಮುದಕನಗೌಡ ಪಾಟೀಲರ 43ನೇ ಪುಣ್ಯತಿಥಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಉತ್ತರಾಖಂಡ ಜಲಪ್ರಳಯ ಪರಿಹಾರ ನಿಧಿಗೆ ಲಿಂಗಾಯತ ಪ್ರಗತಿಶೀಲ ಸಂಘದಿಂದ ಸಂಗ್ರಹಿಸಿದ ರು. 2 ಲಕ್ಷ ಸಮರ್ಪಣಾ ಕಾರ್ಯಕ್ರಮ ಆ. 12ರ ಸಂಜೆ 7.30ಕ್ಕೆ ನಡೆಯಲಿದೆ. ಸಾನ್ನಿಧ್ಯವನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ವಹಿಸುವರು. ಅತಿಥಿಗಳಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಬಿ.ಆರ್. ಯಾವಗಲ್, ಮಾಜಿ ಶಾಸಕ ಡಿ.ಆರ್. ಪಾಟೀಲ ಆಗಮಿಸುವರು. ಎಂ.ಎ. ಹಂಚಿನಾಳ ಅವರಿಂದ ಬಸವ ವಚನಾಮೃತ ಉಪನ್ಯಾಸ ಜರುಗಲಿದೆ. ಎಸ್.ಎಸ್. ಪಾಟೀಲ ಪ್ರತಿಷ್ಠಾನ ವತಿಯಿಂದ ಗದಗ ಜಿಲ್ಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಶೇ. 92 ಅಂಕ ಗಳಿಸಿದ ಪರಿಶಿಷ್ಟ ಜಾತಿಯ ಸನ್ಮತಿ ಘೋಡಕೆ, ಜಿ.ಓ. ಶಹಾ ಹಾಗೂ ಸಾಮಾನ್ಯ ವಿಭಾಗದಲ್ಲಿ ಶೇ. 98.8 ಅಂಕ ಗಳಿಸಿದ ಸುಮತಿ ಗೌರಿ ಇವರಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಚೆಕ್ ವಿತರಣೆ ನಡೆಯುವುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.