ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪುಸ್ತಕ ಮಳಿಗೆಗೆ ಬೆಂಕಿ: ರು. 2 ಲಕ್ಷ ಹಾನಿ

Lingaraj Badiger
Updated On : 12 Aug 2013, 11:29 am

ಬ್ಯಾಡಗಿ: ಪಟ್ಪಣದ ಚಾವಡಿ ರಸ್ತೆಯ ಮಾರುತಿ ಸಂಕೀರ್ಣದ ಪುಸ್ತಕ ಮಾರಾಟದ ವಾಣಿಜ್ಯ ಮಳಿಗೆಯೊಂದರಲ್ಲಿ ಶನಿವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ಮಳಿಗೆ ಭಾಗಶಃ ಸುಟ್ಟಿದೆ. ಸ್ಥಳೀಯ ನಿವಾಸಿ ಮಂಜಣ್ಣ ವಾಲಿಶೆಟ್ಟರ ಎಂಬುವರಿಗೆ ಸೇರಿದ ಶಿವಯೋಗಿಶ್ವರ ಪುಸ್ತಕ ವ್ಯಾಪಾರಿ ಕೇಂದ್ರದಲ್ಲಿ ರಾತ್ರಿ ಹಠಾತ್ತಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಂಗಡಿಯಲ್ಲಿದ್ದ ರು. 2 ಲಕ್ಷ ಮೌಲ್ಯದ ಪುಸ್ತಕ ಹಾಗೂ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.
ತಪ್ಪಿದ ದುರಂತ: ಎಂದಿನಂತೆ ಮಳಿಗೆ ಬಾಗಿಲನ್ನು ರಾತ್ರಿ 9ರ ಸುಮಾರಿಗೆ ಮುಚ್ಚಿ ಮಾಲೀಕರು ಮನೆಗೆ ತೆರಳಿದ ಸ್ವಲ್ಪ ಹೊತ್ತಿನಲ್ಲೇ ವಿದ್ಯುತ್ ತಂತಿ ಸುಟ್ಟ ವಾಸನೆಗೆ ಜನ ಎಚ್ಚೆತ್ತು, ಗಾಬರಿಗೊಂಡರು. ಸುತ್ತಲಿನ ಮನೆ ಹಾಗೂ ರಸ್ತೆಯಲ್ಲಿ ಸಂಚರಿಸುವ ಜನರು ಪುಸ್ತಕದ ಅಂಗಡಿಯಿಂದ ಹೊಗೆ ಬರುತ್ತಿರುವುದನ್ನ್ನು ಪತ್ತೆ ಹಚ್ಚಿ ತಕ್ಷಣವೇ ಅಗ್ನಿಶಾಮಕದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಕ್ಷಣಾರ್ಧದಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಹೀಗಾಗಿ, ಈ ಸಂಕೀರ್ಣದಲ್ಲಿದ್ದ ಎಲೆಕ್ಟ್ರಾನಿಕ್ಸ್, ಮೊಬೈಲ್, ಸ್ಟೇಷನರಿ ಮಳಿಗೆಗಳು ಪಾರಾದವು. ಪೊಲೀಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಸಕರ ಭೇಟಿ: ಘಟನಾ ಸ್ಥಳಕ್ಕೆ ಶಾಸಕ ಬಸವರಾಜ ಶಿವಣ್ಣನವರ ಹಾಗೂ ಉಪತಹಸೀಲ್ದಾರ್ ಬಿ.ಎಸ್. ಕೊಪ್ಪದ ಭೇಟಿ ನೀಡಿ, ಹಾನಿ ಪರಿಶೀಲಿಸಿದರು. ಮಾಲೀಕ ಮಂಜಣ್ಣ ವಾಲಿಶೆಟ್ಟರ ಅವರೊಂದಿಗೆ ಚರ್ಚಿಸಿ, ಸಾಂತ್ವನ ಹೇಳಿದರು. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ವ್ಯಕ್ತಪಡಿಸಿದ್ದಲ್ಲದೆ, ಕಂದಾಯ ನಿರೀಕ್ಷಕರಿಗೆ ಅಂದಾಜು ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement