ಅಪವಿತ್ರ ಮೈತ್ರಿ ಕೈಗೆ ಲಾಭ
ಹಾವೇರಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಮಾಡಿಕೊಂಡಿರುವ ಅಪವಿತ್ರ ಮೈತ್ರಿ ಕಾಂಗ್ರೆಸ್ಗೆ ಪಾಲಿಗೆ ದೊಡ್ಡ ಶಕ್ತಿಯಾಗಿದ್ದು, ಇದುವೇ ಕಾಂಗ್ರೆಸ್ ಅಭ್ಯರ್ಥಿ ಗೆಲವಿಗೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡಗಳ ವಿಭಾಗದ ಅಧ್ಯಕ್ಷ ಟಿ. ಈಶ್ವರ ಹೇಳಿದರು.
ಬಿಜೆಪಿ-ಕೆಜೆಪಿ ಕಳೆದ ವಿಧಾನಸಭೆ ಚುನಾವಣೆ ವೇಳೆ ಪರಸ್ಪರ ಕಚ್ಚಾಡಿಕೊಂಡು ಬೇರೆಯಾಗಿದ್ದವು. ಬಿಜೆಪಿಯಿಂದ ಬೇಸತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೆಜೆಪಿ ಹುಟ್ಟುಹಾಕಿದ್ದರು. ಈಗ ಎರಡು ಪಕ್ಷಗಳು ಮತ್ತೆ ಒಂದಾಗುತ್ತಿವೆ. ಇದರಲ್ಲಿ ಜನರ ಹಿತ ಅಥವಾ ಸಮಾಜದ ಹಿತ ಕಾಣುತ್ತಿಲ್ಲ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ದೂರಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಸಹೋದರ ಪ್ರದೀಪ ಶೆಟ್ಟರ್ ಅವರನ್ನು ್ನ ವಿಧಾನ ಪರಿಷತ್ ಸದಸ್ಯರನ್ನಾಗಿಸಿ, ಅತ್ತ ಪ್ರಹ್ಲಾದ ಜೋಶಿ ಅವರನ್ನು, ಇತ್ತ ಶಿವಕುಮಾರ ಉದಾಸಿ ಅವರನ್ನು ಸಂಸದರನ್ನ್ನಾಗಿ ಮಾಡುವ ಹುನ್ನ್ನಾರ ಕಾಣುತ್ತಿದೆ ಎಂದೂ ಈಶ್ವರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ಮುಖಂಡರಾದ ಬಸವರಾಜ ಹಾದಿಮನಿ, ಸಂಜೀವಕುಮಾರ ನೀರಲಗಿ, ಪ್ರಕಾಶ ಹಾದಿಮನಿ, ಸುಭಾಸ ತಳವಾರ, ನಾಗಪ್ಪ ತಿಪ್ಪಕ್ಕಳವರ ಇದ್ದರು.