ಪುಟ್ಟರಾಜ ಗವಾಯಿಗಳ ಕಲಾ ಸಂಘದಿಂದ ಸಿ.ಡಿ. ಯತ್ನಳ್ಳಿಗೆ ಸನ್ಮಾನ
ಶಿಗ್ಗಾಂವಿ: ಪಟ್ಟಣದ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳವರ ಕಲಾವಿದರ ಸಂಘದ ವತಿಯಿಂದ ಶಿಗ್ಗಾಂವಿ ತಾಲೂಕು ನೌಕರರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಡಿ. ಯತ್ನ್ನಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕಲಾವಿದರ ಸಂಘದ ಗೌರವಾಧ್ಯಕ್ಷ ಕೆ. ಕೊಟ್ರೇಶ ಮಾಸ್ತರ ಬಳಗಲಿ ಅಧ್ಯಕ್ಷತೆ ವಹಿಸಿ, ಯತ್ನ್ನಳ್ಳಿಯವರು ತಮ್ಮ ಸರ್ಕಾರಿ ಸೇವೆಯ ಜತೆಗೆ ಸಮಾಜದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ನಮ್ಮ ಕಲಾವಿದರ ಸಂಘದ ಜತೆ ಅವರಿಗೆ ಅವಿನಾಭಾವ ಸಂಬಂಧ ಇದೆ. ಅವರ ಸೇವೆ ಇನ್ನಷ್ಟು ಸಮಾಜಮುಖಿಯಾಗಲಿ ಎಂದು ಹಾರೈಸಿದರು.
ಸಂಘದ ಅಧ್ಯಕ್ಷ ಫಕ್ಕಿರೇಶ ಕೊಂಡಾಯಿ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಶಿಕ್ಷಕ ವಿ.ಎಸ್. ಶೇಗಡಿ, ರಾಜ್ಯ ಪ್ರಶಸ್ತಿ ವಿಜೇತ ಸಂಗೀತಗಾರ ಹನುಮಂತಪ್ಪ ಕಾಮನಹಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು.
ಮಲ್ಲಿಕಾರ್ಜುನಸ್ವಾಮಿ ಆರಾಧ್ಯಮಠ, ಎಸ್.ಎನ್. ಮುಗಳಿ, ಎಸ್.ಕೆ. ಹೂಗಾರ, ಸಿ.ವಿ. ಮತ್ತಿಗಟ್ಟಿ, ಎಂ.ಬಿ. ಹಳೆಮನಿ, ಶೇಕಣ್ಣಾ ಜೋಳದ, ಸಿದ್ದೇಶ ಮಾಸ್ತರ್ ನಿಡಗುಂದಿ, ಅಶೋಕ ಕುರುಬರ, ಬಿ.ಡಿ. ಪಾಟೀಲ, ಬಸವರಾಜ ಸವಣೂರ, ನಿಂಗಪ್ಪ ಇಂಗಳಗಿ, ಚಿನ್ನಪ್ಪ ಕುಂದಗೋಳ, ಈಶ್ವರಗೌಡ ಪಾಟೀಲ, ಬಸಪ್ಪ ಬದ್ರಶೆಟ್ಟಿ, ಈರಣ್ಣ ಚಿಂಚಲಿ, ಮೆಹಬೂಸಾಬ ನದಾಫ್ ಇದ್ದರು. ಶಿವಾನಂದ ಹೊಸಮನಿ ನಿರೂಪಿಸಿದರು. ಬಸವರಾಜ ಗೊಬ್ಬಿ ಸ್ವಾಗತಿಸಿದರು. ಸಂಘದ ಪದಾಧಿಕಾರಿಗಳು ಇದ್ದರು.