ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನೀರು ಶುದ್ಧೀಕರಣ ಯಂತ್ರ ವಿತರಣೆ

Vishwanath S
Updated On : 15 Aug 2013, 11:27 am

ಹಿರೇಕೆರೂರು: ಭಾರತೀಯ ಸ್ಟೇಟ್ ಬ್ಯಾಂಕ್ ಲಾಭ ಗಳಿಕೆಗೆ ಜತೆಗೆ ಸಮಾಜ ಸೇವೆಯಲ್ಲೂ ತೊಡಗಿಕೊಂಡಿದೆ. ಜನರಿಗೆ ಆರೋಗ್ಯ, ಆರ್ಥಿಕ ಸೌಲಭ್ಯ ನೀಡುತ್ತಿದೆ ಎಂದು ಶಾಖಾ ವ್ಯವಸ್ಥಾಪಕ ರಮೇಶ ಅಂಕಲಗಿ ತಿಳಿಸಿದರು.
ನೂಲಗೇರಿ ಸರ್ಕಾರಿ ಹಿಪ್ರಾ ಶಾಲೆಗೆ ರು. 10 ಸಾವಿರ ಮೌಲ್ಯದ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ವಿತರಿಸಿ ಮಾತನಾಡಿದ ಅವರು, ಬ್ಯಾಂಕ್‌ಗಳು ಬರೀ ಲಾಭ ಮಾಡಿಕೊಳ್ಳುವ ಕೆಲಸ ಮಾಡುತ್ತವೆ ಎಂಬ ಭಾವನೆ ಜನರಲ್ಲಿದೆ. ಆದರೆ, ಎಸ್‌ಬಿಐ ಸಾಮಾಜಿಕ ಕಳಕಳಿ ಮೆರೆಯುತ್ತಿದೆ. ದೇಶಾದ್ಯಂತ 14 ಸಾವಿರ ನೀರು ಶುದ್ಧೀಕರಣ ಯಂತ್ರಗಳನ್ನು ಶಾಲೆಗಳಿಗೆ ವಿತರಿಸಲಾಗಿದೆ. ಕೆಲವೆಡೆ ಪ್ಯಾನ್ ಹಾಗೂ ಸೌರದೀಪಗಳನ್ನೂ ನೀಡಲಾಗಿದೆ. ಶಾಲೆಗಳಲ್ಲಿ ಗರಿಷ್ಠ ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿಯಬೇಕು ಎಂದರು.
ಬ್ಯಾಂಕ್ ವ್ಯವಸ್ಥಾಪಕ ರಮೇಶ ಅಂಕಲಗಿ, ಮುಖ್ಯ ಸಹಾಯಕ ವಿ.ಬಿ. ಚಿಟ್ಟೂರ, ಕ್ಷೇತ್ರ ವಿಸ್ತರಾಣಾಧಿಕಾರಿ ಆನಂದ ಪಾಟೀಲ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರ ಕೋರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ದೇವೇಂದ್ರಪ್ಪ, ಮುಖ್ಯೋಪಾಧ್ಯಾಯ ಸಿಕೆ ಹಿರೇಮಠ, ಗ್ರಾಮದ ಮುಖಂಡರಾದ ಎಂಎಂ ಹುಲ್ಮನಿ, ನಾಗರಾಜ ದಳವಾಯಿ, ನಾಗರಾಜ ಪುರದ, ಚಂದ್ರಕಲಾ ದಳವಾಯಿ, ಶಿಕ್ಷಕರಾದ ಬಸವರಾಜ ಸೊರಟೂರ, ಎಂಡಿ ವೀರಾಪುರ, ಭೀಮಪ್ಪ ಸೊಟ್ಟಪ್ಪನವರ, ಎಂ.ಎಸ್. ಮರಿಗೌಡ್ರ, ಬಿ.ಎಂ. ಮುದಕನಗೌಡ್ರ, ಎಸ್.ಬಿ. ಬಳ್ಳಾರಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement