ತಾಪಂನಲ್ಲಿ ಧ್ವಜಾರೋಹಣ
ಶಿಗ್ಗಾಂವಿ: ಶಿಗ್ಗಾಂವಿ ತಾಪಂ ಕಾರ್ಯಾಲಯದ ಮುಂದೆ ಇಒ ಬಿ. ರೇವಣ್ಣ 67ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ರಾಷ್ಟ್ರಗೀತೆ ಮತ್ತು ರೈತಗೀತೆ ಹಾಡಿದರು. ತಾಪಂ ಅಧ್ಯಕ್ಷೆ ಉಷಾ ಬಿಳೆಕುದರಿ, ಸುಗಂಧಾಬಾಯಿ ಘೋಡಕೆ, ಫರೀದಾಬಾನು ಸೇತಸನದಿ, ನಿಂಗಣ್ಣ ಹರಿಜನ, ಉಮಾ ಡವಗಿ, ವಿ.ಎಂ. ಕಿವುಡನವರ, ಕೆ.ಆರ್. ರಿತ್ತಿ, ತಾಪಂ ಸಿಬ್ಬಂದಿ ಇದ್ದರು.
ಉತ್ಸವದಲ್ಲಿ ಸಂಭ್ರಮ
ಶಿಗ್ಗಾಂವಿ: ಲಿಮ್ಕಾ ಮುಂತಾದ ದಾಖಲೆ ಪುಸ್ತಕಗಳಲ್ಲಿ ಸೇರಿ ವಿಶ್ವ ಮಾನ್ಯತೆ ಗಳಿಸಿರುವ ಗೋಟಗೊಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಉತ್ಸವ ರಾಕ್ ಗಾರ್ಡನ್ನಲ್ಲಿ 67ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮದ ಮುಖಂಡ ಭೀಮಣ್ಣ ದೊಡಮನಿ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕ ವಿ.ಡಿ. ಛಬ್ಬಿ ಪ್ರಾಸ್ತಾವಿಕ ಮಾತನಾಡಿದರು. ಕೋಟೆಪ್ಪ ಸುಂಕದ ನಿರೂಪಿಸಿದರು. ಚಿದಂಬರ ವಂದಿಸಿದರು.