ಸಾಕ್ಷರತಾ ಧ್ವಜಾರೋಹಣ
ಹಾವೇರಿ: ಸಾಕ್ಷರ ಭಾರತ ಮಾಡುವ ಉದ್ದೇಶದಿಂದ ಆ. 15ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಾಕ್ಷರತಾ ಧ್ವಜಾರೋಹಣವನ್ನು ಜಿಪಂ ಉಪ ಕಾರ್ಯದರ್ಶಿ ಮಹಾಂತೇಶ ಬೀಳಗಿ ನೆರವೇರಿಸಿದರು. ಜಿಲ್ಲೆಯ 7 ತಾಲೂಕುಗಳ 208 ಗ್ರಾಪಂಗಳಲ್ಲಿ ಸಾಕ್ಷರತಾ ಧ್ವಜಾರೋಹಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ ಐ.ಎ. ಲೋಕಾಪುರ ತಿಳಿಸಿದರು. ಜಿಪಂ ಮುಖ್ಯ ಯೋಜನಾಧಿಕಾರಿ ಬಸನಗೌಡ್ರ ಹಾಗೂ ಡಿಡಿಪಿಐ ಎಸ್.ಬಿ. ಕೊಡ್ಲಿ ಇದ್ದರು. ಅನಕ್ಷರತೆ ಒಂದು ಶಾಪ. ಅದನ್ನು ತೊಲಗಿಸಲೇಬೇಕು ಎಂದು ಸಾರಿದ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಜಿಲ್ಲಾ ಸಂಯೋಜಕ ಎಲ್.ಯು. ನಾಯ್ಕರ್, ಕವಿತಾ ಜಿ. ಮತ್ತು ಮಮತಾ ಮಾಚೇನಳ್ಳಿ ಪೂಜೆ ಸಲ್ಲಿಸಿದರು. ಕೇಂದ್ರ ಸರ್ಕಾರದಿಂದ ನಿಗದಿತವಾದ 'ಸಾಕ್ಷರ ಸೂರಜ್' ಸಾಕ್ಷರತಾ ಗೀತೆಯನ್ನು ಜಿಲ್ಲಾ ಸಂಯೋಜಕ ನಾರಾಯಣ ಕರೆವ್ವನವರ ಹಾಡಿದರು. ಕಾರ್ಯಕ್ರಮ ಸಹಾಯಕ ಚಂದ್ರಕಾಂತ ಕೂಸನೂರ್ ಕಾರ್ಯಕ್ರಮ ನಿರ್ವಹಿಸಿದರು.
ಮಾಜಿ ಯೋಧಗೆ ಸನ್ಮಾನ
ಹಾವೇರಿ: ನಾಗೇಂದ್ರನಮಟ್ಟಿಯ 5ನೇ ವಾರ್ಡ್ನಲ್ಲಿ ಆದರ್ಶ ಯುವಕ ಮಂಡಳಿ 67ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾಜಿ ಯೋಧ ಆರ್.ಎಸ್. ಹೊಸಮನಿ ಅವರನ್ನು ಸನ್ಮಾನಿಸಿತು. ಅಧ್ಯಕ್ಷ ಪ್ರಕಾಶ ಅರಳಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಹನುಮಂತಪ್ಪ ದೇವಗಿರಿ ಧ್ವಜಾರೋಹಣ ಮಾಡಿದರು. ಸಂಗಪ್ಪ ಪಂಪಣ್ಣನವರ, ಹುಡೇದ ಶಿಕ್ಷಕರು, ಪರಸಪ್ಪ ಮೈಲಾರಪ್ಪನವರ, ಚಂದ್ರಣ್ಣ ಹಂಜಗಿ, ಹನುಮಂತಪ್ಪ ಬಾಳಿಕಾಯಿ ಭಾಗವಹಿಸಿದ್ದರು. ಹುತಾತ್ಮ ಯೋಧರಾದ ಅಲ್ಲಾಸಾಬ ಸೋಮನಕಟ್ಟಿ, ಚಂದ್ರಶೇಖರ ನೇಮಿಕಲ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಿ.ಬಿ. ಕೋಳಿವಾಡ ಪ್ರಾರ್ಥಿಸಿದರು. ಚಂದ್ರು ಶೇಲಂ ಸ್ವಾಗತಿಸಿದರು. ರಾಜೇಶ ಬಾಳಿಕಾಯಿ ನಿರೂಪಿಸಿದರು. ಪ್ರದೀಪ ಕುಲಕರ್ಣಿ ವಂದಿಸಿದರು. ಮಾರುತಿ ಚಿಗಟೇರಿ, ಗೋಪಾಲ ಬಿಂಜಡಗಿ, ರವಿ ಹಾವನೂರ, ರಾಮು ಸಾಲಿ, ಪ್ರದೀಪ ಮೊಗವೀರ, ಉದಯ, ಸುರೇಶ, ವೆಂಕಟೇಶ ಹೊಂಬರಡಿ, ಹನುಮಂತ ಧಾರವಾಡ ಇದ್ದರು. ಮಕ್ಕಳಿಗೆ ಸಿಹಿ ಹಂಚಲಾಯಿತು.
ಪತ್ರಕರ್ತರಿಂದ ಆಚರಣೆ
ಹಾವೇರಿ: ಕಾರ್ಯನಿರತ ಪತ್ರಕರ್ತ ಸಂಘದ ಪತ್ರಿಕಾ ಭವನದಲ್ಲಿ 67ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾ ಸಂಘದ ಅಧ್ಯಕ್ಷ ನಿಂಗಪ್ಪ ಚಾವಡಿ ನೆರವೇರಿಸಿದರು. ವಾರ್ತಾಧಿಕಾರಿ ಎಂ. ಜುಂಜಣ್ಣ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪರಶುರಾಮ ಅಗಡಿ, ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ವಿಜಯ ಹೂಗಾರ, ಪ್ರೆಸ್ ಕ್ಲಬ್ ಅಧ್ಯಕ್ಷ ಗಂಗಾಧರ ಹೂಗಾರ, ಪ್ರಧಾನ ಕಾರ್ಯದರ್ಶಿ ಶಿವಾನಂದ ಗೊಂಬಿ, ಮೀಡಿಯಾ ಕ್ಲಬ್ ಪ್ರಧಾನ ಕಾರ್ಯದರ್ಶಿ ರವಿ ಮುಖಿ, ಪತ್ರಕರ್ತರಾದ ವಸಂತಗೌಡ ಪಾಟೀಲ, ರಾಜು ನದಾಫ್, ಪರಶುರಾಮ ಕೇರಿ, ವಾಗೇಶ ಪಾಟೀಲ, ಬಾಪು ನಂದಿಹಳ್ಳಿ, ವಿನಾಯಕ ಹುದ್ದಾರ, ಮಾಲತೇಶ ಕಣವಿ, ರವಿ ಹೂಗಾರ, ಕಿರಣ ಮಾಸಣಗಿ, ಸಂತೋಷ ಇಳಗೇರಿ, ವಾರ್ತಾ ಇಲಾಖೆ ಸಿಬ್ಬಂದಿ ವಸಂತ ಮಡ್ಲೂರ, ಎಚ್.ಎಲ್. ನಾಯಕ, ಚೊಪದಾರ ಇದ್ದರು.