ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾನಗಲ್: ಅಲ್ಲಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Lingaraj Badiger
Updated On : 16 Aug 2013, 11:47 am

ಹಾನಗಲ್ಲ: ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್‌ನ ಬಿಇಡಿ ಕಾಲೇಜಿನಲ್ಲಿ ಮಾಜಿ ಸಚಿವ ಸಿ.ಎಂ. ಉದಾಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಎನ್.ಜಿ. ಕುಂಬಾರಿ, ಜಿ.ಎಸ್. ಕೊಂಡೋಜಿ, ಪ್ರಾಚಾರ್ಯ ಎನ್. ಸದಾಶಿವಪ್ಪ, ಎಸ್.ಸಿ. ವಿರಕ್ತಮಠ ಇದ್ದರು. ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಎ.ಎಸ್. ಬಳ್ಳಾರಿ ಧ್ವಜಾರೋಹಣ ನೆರವೇರಿಸಿದರು.  ಉಪಾಧ್ಯಕ್ಷೆ ಪಿ.ವೈ. ಗುಡಗಡಿ ಹಾಗೂ ನಿರ್ದೆಶಕರು ಉಪಸ್ಥಿತರಿದ್ದರು. ಆದಿಶಕ್ತಿ ಸೌಹಾರ್ದ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಎಂ.ಬಿ. ಕಲಾಲ ತಿರಂಗಾ ಅರಳಿಸಿದರು. ಉಪಾಧ್ಯಕ್ಷ ಆರ್.ಎನ್. ಮಾಸನಕಟ್ಟಿ, ಚನ್ನವೀರಪ್ಪ ಉದಾಸಿ, ಪರಶುರಾಮ ಸಿಂಧೆ, ಬಿ.ಎಸ್. ಅಕ್ಕಿವಳ್ಳಿ ಇದ್ದರು. ಅರ್ಬನ್ ಬ್ಯಾಂಕ್‌ನಲ್ಲಿ ರಮೇಶ ಚಿನ್ನಮುಳಗುಂದ ಧ್ವಜ ಅರಳಿಸಿದರು. ಗಿರೀಶ ದೇಶಪಾಂಡೆ, ಶಂಭು ಕೋಟಿ, ಗಿರಿರಾಜ ಕಲಾಲ, ಬನಶಂಕರಿ ದೇಸಾಯಿ, ವೀರೇಶ ಕೊಂಡೋಜಿ, ಚನ್ನವೀರಪ್ಪ ಉದಾಸಿ, ಎಸ್.ಬಿ.ದೊಡ್ಡಮನಿ, ಮಾಜಿ ಆದ್ಯಕ್ಷ ವಿ.ಎಸ್. ಚಿನ್ನಮುಳಗುಂದ ಇದ್ದರು.
ಎಪಿಎಂಸಿಯಲ್ಲಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಲಿಟಲ್ ಹಾರ್ಟ್ ಹಿಪ್ರಾ ಶಾಲೆಯಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅದ್ಯಕ್ಷ ಭೋಜರಾಜ ಕರೂದಿ, ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಳ್ಳಿ, ತಾಪಂನಲ್ಲಿ ಇಓ ಮನೋಜಕುಮಾರ ಗಡಬಳ್ಳಿ, ಸಿಡಿಪಿಓ ಕಚೇರಿಯಲ್ಲಿ ಬಿ.ಆರ್. ಶೆಟ್ಟರ, ಪೊಲೀಸ್ ಇಲಾಖೆಯಲ್ಲಿ ಸಿಪಿಐ ಬಸವರಾಜ ಮಂಟೂರ, ಪುರಸಭೆಯಲ್ಲಿ ಮುಖ್ಯಾಧಿಕಾರಿ ಸೋಮಶೇಖರ, ಲೋಕೋಪಯೋಗಿ ಇಲಾಖೆಯಲ್ಲಿ ಅಭಿಯಂತ ಬಿ.ವೈ. ಬಂಡಿವಡ್ಡರ, ಕುಮಾರೇಶ್ವರ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ, ಎನ್‌ಸಿಜೆಸಿ ಕಾಲೇಜಿನಲ್ಲಿ ಪ್ರಾಚಾರ್ಯೆ ಅನಿತಾ ಹೊಸಮನಿ, ಎಸ್‌ಕೆಎಸಿ ಕಾಲೇಜಿನಲ್ಲಿ ಪ್ರಾಚಾರ್ಯ ಎನ್.ಬಿ. ಬಣಕಾರ, ಜಿಪಂನಲ್ಲಿ ಅಭಿಯಂತ ಕೆ.ಆರ್. ಮಠದ, ಛತ್ರಪತಿ ಶಿವಾಜಿ ಸಹಕಾರಿ ಸಂಘದಲ್ಲಿ ಅಧ್ಯಕ್ಷ ರಾಜು ಗೌಳಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಾ೤ ಚಂದ್ರಪ್ಪ ನರಸಗೊಂಡರ, ನೀರಾವರಿ ಇಲಾಖೆಯಲ್ಲಿ ಸುರೇಂದ್ರ ದೊಡ್ಡಮನಿ, ಸರಸ್ವತಿ ಮಹಿಳಾ ಮಂಡಳದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮೀ ಗುಡಗುಡಿ, ಸ್ನೇಹಾ ಮಹಿಳಾ ಮಂಡಳದಲ್ಲಿ ಅಧ್ಯಕ್ಷೆ ಮಧುಮತಿ ಪೂಜಾರ, ಆಟೋ-ಟೆಂಪೋ ಚಾಲಕರ-ಮಾಲೀಕರ ಸಂಘದಲ್ಲಿ ಅತಿಕ್ ಅಹ್ಮದ ಲೋಹಾರ, ಜಯಕರ್ನಾಟಕ ಸಂಘಟನೆ ಕಚೇರಿಯಲ್ಲಿ ರಾಮು ಯಳ್ಳೂರ ಧ್ವಜಾರೋಹಣ ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement