ಹೋರಾಟದ ಫಲ ಸ್ವಾತಂತ್ರ್ಯ
ಶಿಗ್ಗಾಂವಿ: ದೇಶಭಕ್ತರ ಹೋರಾಟದಿಂದ ಸಿಕ್ಕ ಸ್ವಾತಂತ್ರ್ಯದ ಫಲವಾಗಿ ನಾವಿಂದು ಸಮೃದ್ಧ ಸ್ವಾವಲಂಬಿ ಬದುಕು ನಡೆಸುವಂತಾಗಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು. ಶ್ರೀ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಮಾಜಿ ಸದಸ್ಯ ವೀರಣ್ಣ ಬಡ್ಡಿ, ಸಂಸ್ಥೆ ನಿರ್ದೇಶಕ ಎಚ್.ಎಸ್. ಹಲಸೂರ, ಶಿವಪುತ್ರಪ್ಪ ಜಕ್ಕಣ್ಣವರ, ಅಶೋಕ ಕಾಳೆ, ರವಿ ಮಹಾಂತಶೆಟ್ಟರ, ಮುಖ್ಯಶಿಕ್ಷಕ ಎ.ಎನ್. ಕನವಳ್ಳಿ, ಜಿ.ಎಂ. ಅರಗೋಳ, ಸಿ.ಟಿ. ಪಾಟೀಲ, ಸಿ.ಬಿ. ಕುನ್ನೂರ ಇದ್ದರು. ನಾಗರಾಜ ದ್ಯಾಮನಕೊಪ್ಪ ಸ್ವಾಗತಿಸಿದರು. ಎಸ್.ಎಸ್. ಘೋಡಗೇರಿ ವಂದಿಸಿದರು. ವಸಂತಮಾಲಾ ದೇಶಪಾಂಡೆ ನಿರೂಪಿಸಿದರು.
ಭಯೋತ್ಪಾದನೆ ಕಿತ್ತೊಗೆಯಿರಿ
ಹಾವೇರಿ: ವೈಚಾರಿಕತೆಯ ನೆಪದಲ್ಲಿ ಭಾರತೀಯ ಸಂಸ್ಕೃತಿ ನಾಶ ಮಾಡುತ್ತಿರುವ ಭಯೋತ್ಪಾದನೆ ವಿರುದ್ಧ ಯುವಜನತೆ ಧ್ವನಿ ಎತ್ತಬೇಕು. ಭೀತಿವಾದವನ್ನೂ ಕಿತ್ತೊಗೆಯಬೇಕಿದೆ ಎಂದು ಪ್ರಾಚಾರ್ಯ ಡಾ ಬಿ.ಸಿ. ಬನ್ನೂರ ಹೇಳಿದರು. ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನಲ್ಲಿ 67ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರೊ ಎಂ.ಎಸ್. ಬೆಂಡಿಗೇರಿ ಕಾರ್ಯಕ್ರಮ ನಿರೂಪಿಸಿದರು.