ಅರ್ಚಕರ ಸಂಘದ ಕಾರ್ಯಾಲಯ ಉದ್ಘಾಟನೆ
ಹಿರೇಕೆರೂರು: ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದ ತಾಲೂಕು ಘಟಕದ ಕಾರ್ಯಾಲಯ ಉದ್ಘಾಟಿಸಲಾಯಿತು.
ನೂತನ ಘಟಕದ ಗೌರವಾಧ್ಯಕ್ಷರಾಗಿ ಬಸವರಾಜಪ್ಪ ಪೂಜಾರ, ಅಧ್ಯಕ್ಷರಾಗಿ ಮಲ್ಲೇಶಪ್ಪ ಪೂಜಾರ, ಉಪಾಧ್ಯಕ್ಷರಾಗಿ ಮಹಾದೇವಪ್ಪ ಪೂಜಾರ, ಕಾರ್ಯದರ್ಶಿಯಾಗಿ ಪ್ರಕಾಶ ಬಡಿಗೇರ ನಿರ್ರ್ದೇಶಕರಾಗಿ ಅಶೋಕ ಎಂ. ಪೂಜಾರ, ಗದಿಗೆಪ್ಪ ತಾವರಗಿ ರಾಘವೇಂದ್ರ ಭೀಮರಾವ್ ದೇಶಪಾಂಡೆ, ಜಗದೀಶ ಬಿ. ಪೂಜಾರ, ದೇವಿರಪ್ಪ ಪೂಜಾರ, ಕರಬಸಪ್ಪ ನಾ ಬಡಿಗೇರ ಆಯ್ಕೆಯಾದರು.
ಈ ಸಂದರ್ಭ ತಾಲೂಕಾಧ್ಯಕ್ಷ ಮಲ್ಲೇಶಪ್ಪ ಪೂಜಾರ ಮಾತನಾಡಿ, ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ಅರ್ಚಕರಿಗೆ ಕಡ್ಡಾಯವಾಗಿ ಗುರುತಿನ ಚೀಟಿ, ಯುನಿಟ್ ಬಾಂಡ್, ಸರ್ಕಾರಿ ವೇತನ ಇತರ ಸವಲತ್ತುಗಳನ್ನು ಪಡೆಯಲು ನಾವೆಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದರು.
ಈ ಹಿನ್ನಲೆಯಲ್ಲಿ ಹಿರೇಕೆರೂರು ತಾಲೂಕಿನ ಎಲ್ಲ ದೇವಸ್ಥಾನಗಳ ಅರ್ಚಕರ ಸಭೆಯನ್ನು ಅ. 20ರಂದು ಕರೆಯಲಾಗಿದೆ ಎಂದರು. ನೂತನ ಘಟಕದ ಕಾರ್ಯಾಲಯವು ಪಟ್ಟಣದ ವಡ್ಡಿನಕಟ್ಟಿ ಬಿಲ್ಡಿಂಗ್‌ನಲ್ಲಿ ಆರಂಭಗೊಂಡಿದ್ದು ತಾಲೂಕಿನ ಅರ್ಚಕರು ತಮ್ಮ ಕುಂದುಕೊರತೆಗಳ ಬಗ್ಗೆ ಸಂಪರ್ಕಿಸಬಹುದು ಎಂದರು.
ಹೆಚ್ಚಿನ ಮಾಹಿತಿಗೆ 94806 18748, 94830 51156 ಸಂಪರ್ಕಿಸಬಹುದು.