ಕೃಷಿ ಪ್ರಶಸ್ತಿ: ಅರ್ಜಿ ಆಹ್ವಾನ
ಹಾವೇರಿ: ಕೃಷಿ ಇಲಾಖೆ 2013-14ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿಯಲ್ಲಿ ರಾಜ್ಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಮುಂಗಾರು ಹಂಗಾಮಿನ ಕೃಷಿ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ರೈತರಿಂದ ಕೃಷಿ ಇಲಾಖೆ ಆ. 31ರೊಳಗಾಗಿ ಹಾಗೂ ಹಿಂಗಾರು ಹಂಗಾಮಿಗೆ ನವೆಂಬರ 30ರೊಳಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯಮಟ್ಟದ ಕೃಷಿ ಸ್ಪರ್ಧೆಗೆ ಬತ್ತ (ನೀರಾವರಿ), ಮಳೆ ಆಶ್ರಿತ ಬೆಳೆಗಳಾದ ರಾಗಿ, ತೊಗರಿ, ಶೇಂಗಾ, ಸೂರ್ಯಕಾಂತಿ, ಕಡಲೆ, ಮುಂಗಾರು ಜೋಳ, ಹಿಂಗಾರಿಜೋಳ, ನೀರಾವರಿ ಮುಸುಕಿನ ಜೋಳ, ಕಬ್ಬು ಹಾಗೂ ಗೋದಿ ನಿಗದಿಸಿದೆ. ಅದರಂತೆ ಜಿಲ್ಲಾ ಮಟ್ಟದ ಸ್ಪರ್ಧೆಗೆ ಮಳೆ ಆಶ್ರಿತ ಗೋವಿನಜೋಳ ನಿಗದಿಯಾಗಿದೆ. ಪ್ರತಿ ಬೆಳೆಗೂ ಕೃಷಿ ಇಲಾಖೆ ಪ್ರತಿ ಹೆಕ್ಟೇರ್ಗೆ ಸ್ಪರ್ಧಾತ್ಮಕ ಇಳುವರಿ ನಿಗದಿಪಡಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ರೈತರು ಮಾಹಿತಿಯನ್ನು ಕೃಷಿ ಇಲಾಖೆಯಿಂದ ಪಡೆದುಕೊಳ್ಳಬಹುದು. ಬೆಳೆ ಸ್ಪರ್ಧೆ ನೋಂದಣಿ ಶುಲ್ಕ ರಾಜ್ಯ ಮಟ್ಟಕ್ಕೆ ಸಾಮಾನ್ಯ ರೈತರಿಗೆ 300 ಹಾಗೂ ಪ. ಜಾತಿ, ಪ.ಪಂಗಡದವರಿಗೆ 75, ಜಿಲ್ಲಾ ಮಟ್ಟದಲ್ಲಿ ಶುಲ್ಕ ರು. 150 ಹಾಗೂ ರು. 40 ತಾಲೂಕು ಮಟ್ಟದಲ್ಲಿ 100 ಹಾಗೂ 25ಗಳಾಗಿದ್ದು, ಅರ್ಜಿಗಳನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು ಎಂದು ಹಾವೇರಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.