ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾನೂನು ಅರಿವು-ನೆರವು ಕಾರ್ಯಕ್ರಮ ಇಂದು

Lingaraj Badiger
Updated On : 19 Aug 2013, 11:55 am

ಹಾನಗಲ್ಲ: ತಾಲೂಕಿನ ಮಕರವಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ 19ರಂದು ಸಂಜೆ 4 ಗಂಟೆಗೆ ಮಹಿಳೆಯರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಿವಿಲ್ ನ್ಯಾಯಾಧೀಶ (ಹಿವಿ) ಎಂ. ರಾಮಚಂದ್ರ ಈ ಕಾರ್ಯಕ್ರಮ ಉದ್ಘಾಟಿಸುವರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಆರ್. ಶೆಟ್ಟರ, ನ್ಯಾಯಾಧೀಶ (ಕಿವಿ) ಮದ್ವೇಶ ದಬೇರ, ವಕೀಲರ ಸಂಘದ ಅಧ್ಯಕ್ಷ ರವಿ ವಡೆಯರ, ಉಪಾಧ್ಯಕ್ಷ ಎಸ್.ಎಚ್. ಸವಣೂರ, ಕಾರ್ಯದರ್ಶಿ ರಂಗನಾಥ ಅಕ್ಕಿವಳ್ಳಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಸೂರ್ಯನಾರಾಯಣ, ಗೋಪಿಕಾ ಟಿ.ಎಸ್. ಅತಿಥಿಗಳಾಗಿ ಭಾಗವಹಿಸುವರು.
ವಕೀಲರಾದ ವೀಣಾ ಬ್ಯಾತನಾಳ ಮತ್ತು ಮಂಗಳಾ ತಿರಕಣ್ಣನವರ ಅವರು ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳೆಯರ ಹಕ್ಕುಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ. ಸಾರ್ವಜನಿಕರು ಪಾಲ್ಗೊಂಡು ಸಮಸ್ಯೆ ಬಗೆಹರಿಸಿಕೊಳ್ಳಬಹುದು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement