ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನೀರು, ಬೀದಿದೀಪ ಶುಲ್ಕ ಸರ್ಕಾರವೆ ಭರಿಸಲಿ

Lingaraj Badiger
Updated On : 19 Aug 2013, 11:51 am

ಶಿಗ್ಗಾಂವಿ: ಗ್ರಾಪಂಗಳ ನೀರು ಸರಬರಾಜು, ಬೀದಿ ದೀಪ ವಿದ್ಯುತ್ ಶುಲ್ಕವನ್ನು ಸರ್ಕಾರ ಭರಿಸುವಂತೆ ವಾರ್ತಾ ಮತ್ತು ಧಾರವಾಡ ಉಸ್ತುವಾರಿ ಸಚಿವ ಸಂತೋಷ ಲಾಡ್‌ಗೆ ಗ್ರಾಪಂ ಸದಸ್ಯರ ಪರ ಸದಸ್ಯ, ಜಿಲ್ಲಾ ಕಾಂಗ್ರೆಸ್ ಸಂಘಟನೆ ಕಾರ್ಯದರ್ಶಿ ಶೇಖಪ್ಪ ವಿ. ಗಣಾಚಾರಿ ಮತ್ತು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹನುಮರೆಡ್ಡಿ ನಡುವಿನಮನಿ ಮನವಿ ಸಲ್ಲಿಸಿದರು.
ಹುಲಗೂರು ಗ್ರಾಮ ಪಂಚಾಯಿತಿ ನೀರು ಸರಬರಾಜು ಹಾಗೂ ಬೀದಿ ದೀಪಗಳ ವಿದ್ಯುತ್ ಶುಲ್ಕ ರು. 42,05,661 ಇರುತ್ತದೆ. ಇದರಲ್ಲಿ ಹಳೆಬಡ್ಡಿ ರು. 6,66,244 ಇದ್ದು ಎಸ್‌ಜಜಿ9-03 ಬಡ್ಡಿ ರು. 88,128 ಸದ್ಯದ ತಿಂಗಳ ಬಡ್ಡಿ ರು. 31,996 ಇರುತ್ತದೆ. ಸರ್ಕಾರದಿಂದ ಬರುವ ಅನುದಾನ ರು. 8 ಲಕ್ಷ ಇರುತ್ತದೆ. ಸರ್ಕಾರದಿಂದ ಬರುವ ಅನುದಾನವು ಬರಿ ಬಡ್ಡಿಗೆ ಹೋಗುತ್ತದೆ.
ಶಿಗ್ಗಾಂವಿ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಒಟ್ಟು ವಿದ್ಯುತ್ ಶುಲ್ಕ ರು. 6 ಕೋಟಿ ಇರುತ್ತದೆ. ಆದ್ದರಿಂದ ಸರ್ಕಾರ ಈ ಹಿಂದೆ ಭರಿಸದಂತೆ ವಿದ್ಯುತ್ ಶುಲ್ಕ ಭರಿಸಬೇಕು ಹಾಗೂ ಸರ್ಕಾರದಿಂದ ಬರುವ ಅನುದಾನವನ್ನು ರು. 15 ಲಕ್ಷಕ್ಕೆ ಏರಿಸಬೇಕು ಮತ್ತು ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ಸದಸ್ಯರುಗಳ ಗೌರವಧನ, ಸಭಾ ಭತ್ಯೆಯನ್ನು ಹೆಚ್ಚಿಗೆ ಮಾಡಬೇಕು, ಖಾಲಿಯಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹಾಗೂ ಕಾರ್ಯದರ್ಶಿಗಳ ಸ್ಥಾನಗಳನ್ನು ಭರ್ತಿ ಮಾಡಬೇಕೆಂದು ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement