ನೌಕರರ ಸಂಘಕ್ಕೆ ಆಯ್ಕೆ
ಶಿಗ್ಗಾಂವಿ: ತಾಲೂಕು ಸರ್ಕಾರಿ ನೌಕರರ ಸಂಘದ 2013-18ರ ಅವಧಿಗೆ ನೌಕರರನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಬಿ.ಕೆ. ಹೊಂಕಣದವರ, ಕಾರ್ಯಾಧ್ಯಕ್ಷರಾಗಿ ಸಿ.ಎಸ್. ಪಾಟೀಲ, ಉಪಾಧ್ಯಕ್ಷರಾಗಿ ಎಸ್.ಎನ್. ಮಾಳಗಿ, ಪಿ.ಬಿ. ಭಜಂತ್ರಿ, ಬರಮಪ್ಪ ಬಡಪ್ಪನವರ, ಎಂ.ವಿ. ಬಂಡಿಹಾಳ, ಎಂ.ಎಂ. ದೇವಕ್ಕಗೌಡ್ರ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಬಿ. ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿಯಾಗಿ ಬಾಸುಸಾಬ ನದಾಫ್, ಬೀರಪ್ಪ ಡೊಕ್ಕೇರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎಂ.ಡಿ. ಬಾಗೇವಾಡಿ, ವಿದ್ಯಾ ಖುರ್ಷಾಪುರ, ಐ.ಎಂ. ಪಾಟೀಲ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಕಾಶ ಓಂದಕರ, ಶ್ರೀಕಾಂತ ಸರ್ಜಾಪುರ, ಲೆಕ್ಕ ಪರಿಶೋಧಕರಾಗಿ ಬಸಲಿಂಗಪ್ಪಗೌಡ ಆಯ್ಕೆ ಆಗಿದ್ದಾರೆ.
ಸಂಘದ ಕಾರ್ಯಚಟುವಟಿಕೆ ಬಲಪಡಿಸುವ ಸಮಿತಿ ರಚಿಸಲಾಗಿದ್ದು, ಕಟ್ಟಡ ನಿರ್ವಹಣಾ ಸಮಿತಿಗೆ ಅಧ್ಯಕ್ಷರಾಗಿ ವಿ.ಜಿ. ದುಂಡಪ್ಪನವರ, ಉಪಾಧ್ಯಕ್ಷರಾಗಿ ಎಂ.ಎಸ್. ಬಸಾಪುರ ಅವರನ್ನು ಆಯ್ಕೆ ಮಾಡಲಾಗಿದೆ.
ನ್ಯಾಯನಿರ್ಣಯ ಸಮಿತಿ ಅಧ್ಯಕ್ಷರಾಗಿ ಬಿ.ಕೆ. ಹೊಂಕಣದವರ, ಉಪಾಧ್ಯಕ್ಷರಾಗಿ ಬಿ.ಆರ್. ಹೊಳೆಪ್ಪನವರ, ದತ್ತು ಗ್ರಾಮ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ಪ್ರಕಾಶ ಔಂದಕರ, ಉಪಾಧ್ಯಕ್ಷರಾಗಿ ವೈ.ಎಸ್. ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.
ನೌಕರರ ಹೋರಾಟ ಸಮಿತಿ ಅಧ್ಯಕ್ಷರಾಗಿ ಬಿ.ಎನ್. ಅರ್ಕಾಚಾರಿ, ಉಪಾಧ್ಯಕ್ಷರಾಗಿ ಎಸ್.ಸಿ. ಚಪ್ಪರಗಾವಿ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆ ಸಮಿತಿ ಅಧ್ಯಕ್ಷರಾಗಿ ಸಿ.ಡಿ. ಯತ್ನ್ನಳ್ಳಿ, ಉಪಾಧ್ಯಕ್ಷರಾಗಿ ಅಶೋಕ ಅಮಾತೆಣ್ಣವರ ಆಯ್ಕೆಯಾಗಿದ್ದಾರೆಂದು ಸಂಘದ ಅಧ್ಯಕ್ಷ ಸಿ.ಡಿ. ಯತ್ನ್ನಳ್ಳಿ ಪ್ರಕಟನೆಯಲ್ಲಿ ತಿಳಿಸದ್ದಾರೆ.
ಚುನಾವಣಾಧಿಕಾರಿಗಳಾಗಿದ್ದ ಸಿ.ವಿ. ಮತ್ತಿಗಟ್ಟಿ ಹಾಗೂ ಶೇಗಡಿ ಅವರನ್ನು ಸನ್ಮಾನಿಸಲಾಯಿತು.