ಇಂದು ನೌಕರರ ಸಂಘದ ಸಭೆ
ಹಿರೇಕೆರೂರು: ಮಾಧ್ಯಮಿಕ ಶಾಲಾ ನೌಕರರ ಸಂಘದ ತುರ್ತು ಸಭೆಯು ರಾಣಿಬೆನ್ನೂರ ತಾಲೂಕಿನ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಆ. 20ರಂದು ಮಧ್ಯಾಹ್ನ 1ಕ್ಕೆ ಜರುಗಲಿದೆ ಎಂದು ಮಾಧ್ಯಮಿಕ ಶಾಲಾ ನೌಕರರ ಜಿಲ್ಲಾ ಘಟಕ ಅಧ್ಯಕ್ಷ ಎಂ.ಬಿ. ಸಾವಜ್ಜಿ ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಸಭೆಯಲ್ಲಿ ಶಿಕ್ಷಣಾ ಇಲಾಖೆ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಅವರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದರಿಂದ ಶಿಕ್ಷಕರಿಗೆ ತೊಂದರೆಯಾಗುತ್ತಿದ್ದು, ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಕಾರ್ಯ ಜು.1ರಿಂದ ಆರಂಭಗೊಂಡು 20ರೊಳಗೆ ಪೂರ್ಣಗೊಳಿಸಬೇಕಿತ್ತು. ಚುನಾವಣೆ ಸಲುವಾಗಿ ಪ್ರಕ್ರಿಯೆ ತಡವಾಗಿದೆ. ಈಗ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಇದನ್ನು ಜಾರಿಗೆ ತಂದರೆ ಆಗುವ ತೊಂದರೆಗಳ ಬಗ್ಗೆ ಇಲಾಖೆ ಗಮನ ಹರಿಸಿಲ್ಲ. ಕಾರಣ ಪ್ರಕ್ರಿಯೆ ಜಾರಿಗೊಳಿಸುವ ಕುರಿತು ಚರ್ಚಿಸಲು, ಹೋರಾಟದ ರೂಪರೇಷೆ ಕೈಗೊಳ್ಳಲು ಈ ಸಭೆ ಕರೆಯಲಾಗಿದೆಂದು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸಾವಜ್ಜಿಯವರ ತಿಳಿಸಿದ್ದಾರೆ.