ಅರಸು, ರಾಜೀವ್ ಆದರ್ಶ ಪಾಲಿಸಿ
ರಾಣಿಬೆನ್ನೂರು: ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು, ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಆದರ್ಶ ಗುಣಗಳನ್ನು ಯುವಜನತೆ ಮೈಗೂಡಿಸಿಕೊಂಡು ದೇಶಸೇವೆಗೆ ಮುಂದಾಗಬೇಕೆಂದು ತಹಸೀಲ್ದಾರ್ ಕೆ.ಎಚ್. ಶಿವಕುಮಾರ ಹೇಳಿದರು.
ತಾಪಂ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಡಿ. ದೇವರಾಜ ಅರಸು ಅವರ 98ನೇ ಜನ್ಮ ದಿನಾಚರಣೆ ಮತ್ತು ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಸದ್ಭಾವನಾ ದಿನಾಚರಣೆ ನಿಮಿತ್ತ ನಗರದ ಬಿಸಿಎಂ ಇಲಾಖೆ ಸಭಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೇವರಾಜ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಅವರು, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಅರಸು ಸಚಿವ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಶೋಷಿತರ ಸಮಗ್ರ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹಗಲಿರುಳು ಸೇವೆ ಸಲ್ಲಿಸಿದ್ದಾರೆ. ದೇಶದ ಆಸ್ತಿಯಾದ ಯುವ ಜನತೆ ದೇಶದ್ರೋಹಿಗಳ ವಿರುದ್ಧ ಹೋರಾಡಲು, ದುಷ್ಟಶಕ್ತಿ ನಿಗ್ರಹಿಸಲು ಮುಂದಾಗಬೇಕು ಎಂದರು.
ಬಿಎಜೆಎಸ್ಎಸ್ ಮಹಿಳಾ ಕಾಲೇಜಿನ ಉಪನ್ಯಾಸಕ ಕಾಂತೇಶ ಅಂಬಿಗೇರ, ಡಿ ದೇವರಾಜ ಅರಸು ಕುರಿತು ಉಪನ್ಯಾಸ ನೀಡಿದರು. ತಾಪಂ ಪ್ರಭಾರಿ ಇಒ ಡಾ ನಾಗನಗೌಡ ರೆಡ್ಡಿ, ಜಿಪಂ ಎಂಜಿನಿಯರಿಂಗ್ ಅಧಿಕಾರಿ ಕುಲಕರ್ಣಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತ ಟಿ.ಸಿ. ಪಾಟೀಲ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಜಾಫರ್ ಶರೀಫ್ ಸುತಾರ, ಸಮಾಜ ಕಲ್ಯಾಣಾಧಿಕಾರಿ ವೈ. ಮಂಜುನಾಥ ಮಾತನಾಡಿದರು.
ಮರಡೆಪ್ಪ ಪೂಜಾರ, ಗಂಗಾಮತಸ್ಥರ ಸಂಘದ ಮುಖಂಡ ಆರ್.ಎಚ್. ಐರಣಿ, ಮೂರ್ತಿ ಸುಣಗಾರ, ಕಾರ್ಯದರ್ಶಿ ಸಿತಿಮನಿ, ಸಬ್ ರಜಿಸ್ಟ್ರಾರ್ ರಂಗನಾಥ, ವಿದ್ಯಾರ್ಥಿ ವಸತಿ ನಿಲಯಗಳ ಮೇಲ್ವಿಚಾರಕರಾದ ವೈ.ಐ. ಕೊರವರ, ಮಂಜುನಾಥ ಎಂ.ಕೆ., ಸುಮಲತಾ ಎಸ್.ಪಿ., ಪ್ರಸಾದ ಆಲದಕಟ್ಟಿ, ಸಿ.ಬಿ. ಪ್ರಸಾದಿಮಠ ಇದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ದಾನ ಗಳಿಸಿರುವ ಬೀರೇಶ ಬಸಪ್ಪ ತಳವಾರ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಸರೋಜಾ ಬಿಲ್ಲಾಳ ಅವರನ್ನು ಸನ್ಮಾನಿಸಲಾಯಿತು. ಬಿಸಿಎಂ ವಿಸ್ತರ್ಣಾಧಿಕಾರಿ ಜಿ.ಬಿ. ಬಾರಕೇರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಸ್.ಕೆ. ಹಾವನೂರು, ಬಿ.ವೈ. ದೊಡ್ಮನಿ, ಬಿ.ಐ. ಯರೇಶಿಮಿ, ಬಿ.ಎಂ. ಯಮ್ಮಿ ಇದ್ದರು. ಮಂಜುನಾಥ ನಿರೂಪಿಸಿ, ವಂದಿಸಿದರು.