ಕಾಂಗ್ರೆಸ್ ಕಚೇರಿಯಲ್ಲಿ ಅರಸು, ರಾಜೀವ್ ಜನ್ಮದಿನ ಆಚರಣೆ
ಹಾವೇರಿ: ಮಾಜಿ ಪ್ರಧಾನಿ ರಾಜೀವ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮ ಹಾವೇರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ರವಿಶಂಕರ ಬೆಂಕಿ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಹಾನಗಲ್ ಶಾಸಕ ಮನೋಹರ ತಹಶೀಲ್ದಾರ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಶಿವಾನಂದ ರಾಮಗಿರಿ, ಮಂಜುನಾಥ ಗೋರಣ್ಣನವರ, ಅಪ್ಪಣ್ಣ ಕಲಾಲ, ಕಾಳಪ್ಪ ಬಡಿಗೇರ, ಸಂಜೀವ ನೀರಲಗಿ, ಜೆ.ಯು. ಪಠಾಣ, ಜಗದೀಶ ಬೆಟಗೇರಿ, ಗುರನಗೌಡ ಪಾಟೀಲ, ವಿ.ವೈ. ಪಾಟೀಲ, ರಮೇಶ ಕಟಕೋಳ, ಎ.ಎಂ. ಜಮಾದಾರ, ದಾಸಪ್ಪ ಕರ್ಜಗಿ, ಎಂ.ಎಂ. ಹಿರೇಮಠ, ಕೊಟ್ರೇಶಪ್ಪ ಬಸೇಗಣ್ಣಿ, ಸುಜಾತಪ್ಪ ಚನ್ನೂರ ಇದ್ದರು ಎಂದು ಪ್ರಕಟಣೆ ತಿಳಿಸಿದೆ.