ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ
ಹಾನಗಲ್ಲ: ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 68ನೇ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ ಸದ್ಭಾವನೆ ದಿನದ ನಿಮಿತ್ತ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಜನಶಕ್ತಿ ಸಮಾಜ ಸೇವಾ ಸಂಸ್ಥೆ ಪದಾಧಿಕಾರಿಗಳು ಹಣ್ಣು, ಬ್ರೆಡ್ ವಿತರಿಸಿದರು. ಅಧ್ಯಕ್ಷ ದಾನಪ್ಪ ಗಂಟೇರ, ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಿಳ್ಳಿ, ತಾಪಂ ಇಒ ಮನೋಜಕುಮಾರ ಗಡಬಳ್ಳಿ, ಬಿಸಿಎಂ ಅಧಿಕಾರಿ ಎನ್.ಎಂ. ಪೂಜಾರ, ಡಾ ನಾಗರಾಜ ಕುರಿ, ನೇತ್ರಾವತಿ, ಶಿವಪ್ಪ ಗೊಲ್ಲರ, ಬಸಪ್ಪ ಹೊಸಮನಿ, ಶ್ರೀಕಾಂತ ದೊಡ್ಡಕುರುಬರ, ಕುಮಾರ ಹೊಸಮನಿ, ಸಿದ್ದಪ್ಪ ಹೊಸನಗರ, ಗುಡ್ಡಪ್ಪ ಗೋಯಿಕಾಯಿ, ತಿಮ್ಮಣ್ಣ ನೆಗಳೂರ, ಫಕ್ಕಿರಪ್ಪ ಮಲ್ಲಿಗಾರ ಉಪಸ್ಥಿತರಿದ್ದರು.