ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 21 Aug 2013, 11:34 am

ಇಂದು ರಕ್ಷಾಬಂಧನ
ರಾಣಿಬೆನ್ನೂರು: ರಕ್ಷಾ ಬಂಧನ ಹಬ್ಬದ ನಿಮಿತ್ತ ನಗರದ ಎಲ್ಲ ಶಾಲಾ-ಕಾಲೇಜು, ಬಸ್-ರೇಲ್ವೆ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಆ. 21ರಂದು ಬೆಳಗ್ಗೆ 10.30ಕ್ಕೆ ರಾಖಿ ಕಟ್ಟಲಾಗುವುದು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಚೇತನ ನಂದಿಹಳ್ಳಿ ತಿಳಿಸಿದ್ದಾರೆ.
ಶ್ರಾವಣಿ ಕಾರ್ಯಕ್ರಮ
ಹಾವೇರಿ: ಶ್ರಾವಣಿ (ಜನಿವಾರ ಹಾಕಿಕೊಳ್ಳುವ) ಕಾರ್ಯಕ್ರಮ ನಗರದ ವಿಶ್ವ ಮಧ್ವ ಮಹಾಪರಿಷತ್ ಆಶ್ರಯದಲ್ಲಿ ಉತ್ತರಾದಿ ಮಠದಲ್ಲಿ ಪಂ. ವಾಸುದೇವಾಚಾರ್ಯ ಹತ್ತಿಮತ್ತೂರ ಅವರ ನೇತೃತ್ವದಲ್ಲಿ ಮಂಗಳವಾರ ನೆರವೇರಿತು. ವಿಶ್ವ ಮಧ್ವ ಮಹಾ ಪರಿಷತ್ ಸಂಚಾಲಕರಾದ ವಸಂತ ಮೊಕ್ತಾಲಿ, ಪದಾಧಿಕಾರಿಗಳಾದ ನಾಗರಾಜ ಗಡಗಿ, ವಾಸುದೇವ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಗೋವಿಂದ ಕುಲಕರ್ಣಿ, ಎಂ.ಎನ್. ಗುತ್ತಲ, ಪವನ ಆಳಂದಿಕರ ಉಪಸ್ಥಿತರಿದ್ದರು.
ದಸರಾ, ಪೈಕಾ ಕ್ರೀಡಾಕೂಟ
ಹಾವೇರಿ: ಪ್ರಸಕ್ತ ಸಾಲಿನ ಹಾವೇರಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆ. 23ರಂದು ಹಾಗೂ ಪಂಚಾಯತ್ ಯುವ ಕ್ರೀಡಾ ಮತ್ತು ಖೇಲ್ ಅಭಿಯಾನ್ ಕ್ರೀಡಾಕೂಟಗಳು ಆ. 24ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿವೆ.
ದಸರಾ ಕ್ರೀಡಾಕೂಟ: ಅಥ್ಲೆಟಿಕ್ಸ್, ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಖೋ-ಖೋ, ಫುಟ್ಬಾಲ್, ಬಾಲ್ ಬ್ಯಾಡ್ಮಿಂಟನ್ ಹಾಗೂ 100, 200, 400, 800, 1500 ಹಾಗೂ 3000 ಮೀ. ಓಟ, ಉದ್ದಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ 4್ಢ100 ಮೀ. ರಿಲೇ 4್ಢ400 ಮೀ. ರಿಲೇ, ಜಿಲ್ಲಾ ಮಟ್ಟದಲ್ಲಿ ಹಾಕಿ, ಬಾಸ್ಕೆಟ್‌ಬಾಲ್, ಟೇಬಲ್ ಟೆನ್ನಿಸ್ ಸ್ಪರ್ಧೆಗಳು ಜರುಗಲಿವೆ.
ಪೈಕಾ ಕ್ರೀಡಾಕೂಟ: ಅಥ್ಲೆಟಿಕ್ಸ್, ವಾಲಿಬಾಲ್, ಕಬಡ್ಡಿ, ಖೋ-ಖೋ, ಫುಟ್ಬಾಲ್ ಹಾಗೂ ಬಾಸ್ಕೆಟ್‌ಬಾಲ್, ಭಾರ ಎತ್ತುವ ಸ್ಪರ್ಧೆ, 100, 200, 400, 800, 1500 ಹಾಗೂ 3000 ಮೀ. ಓಟ, ಉದ್ದಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 4 ್ಢ 100 ಮೀ. ರಿಲೇ ಹಾಗೂ ಮಹಿಳೆಯರಿಗೆ ಮಾತ್ರ ಹಾಕಿ ಸ್ಪರ್ಧೆ ನಡೆಯಲಿವೆ. ತಾಲೂಕು ಮಟ್ಟದಲ್ಲಿ ಮೊದಲ ಮೂರು ಸ್ಥಾನ ಗಳಿಸಿದವರು ಹಾಗೂ ಗುಂಪು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ತಂಡ ಮಾತ್ರ ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹ. ಕ್ರೀಡಾಪಟುಗಳ ವಯಸ್ಸು 2013ರ ಡಿ. 31ಕ್ಕೆ 16 ವರ್ಷ ಮೀರಿರಬಾರದು. ಶಾಲೆ-ಕಾಲೇಜು ಮುಖ್ಯಸ್ಥರಿಂದ ವಯಸ್ಸಿನ ದೃಢೀಕರಣ ಪತ್ರ ಕಡ್ಡಾಯ ತರಬೇಕು ಕು ಎಂದು ತಾಪಂ ಇಓ ತಿಳಿಸಿದ್ದಾರೆ.
ದುರುಗಪ್ಪ ನಿಧನ
ಬ್ಯಾಡಗಿ: ಎಪಿಎಂಸಿ ಯಾರ್ಡ್‌ನಲ್ಲಿ ಮೆಣಸಿನಕಾಯಿ ವರ್ತಕ ದುರಗಪ್ಪ ಹನುಮಂತಪ್ಪ ಹರಪನಹಳ್ಳಿ (75) ನಿಧರಾಗಿದ್ದಾರೆ. ಅವರಿಗೆ ನಾಲ್ವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಪಟ್ಟಣದ ಬೆಟ್ಟದ ಮಲ್ಲೇಶ್ವರ ಗುಡ್ಡದ ರಸ್ತೆ ಬಳಿಯಿರುವ ಮುಕ್ತಿಧಾಮದಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಸಕಲ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಅಡುಗೆ ಅನಿಲ ವಿತರಣೆ ಸಮಸ್ಯೆ ಖಂಡಿಸಿ ಪ್ರತಿಭಟನೆ

ಹಿರೇಕೆರೂರು: ಪಟ್ಟಣದ ಗ್ಯಾಸ್ ಏಜೆನ್ಸಿ ತಾಲೂಕಿನಲ್ಲಿರುವ ಅಡುಗೆ ಅನಿಲ ಬಳಕೆದಾರರಿಗೆ ಸಮರ್ಪಕವಾಗಿ ಸಿಲಿಂಡರ್ ವಿತರಿಸಲು ವಿಫಲರಾಗಿದ್ದಾರೆ. ಸಮರ್ಪಕವಾಗಿ ಗ್ಯಾಸ್ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕರವೇ ಜಿಲ್ಲಾಧ್ಯಕ್ಷ ಕರಬಸಯ್ಯ ಬಸರಿಹಳ್ಳಿಮಠ ಮಾತನಾಡಿ, ಪಟ್ಟಣದ ಬಸವೇಶ್ವರ ಗ್ಯಾಸ್ ಏಜೆನ್ಸಿ ಗ್ರಾಹಕರಿಗೆ ಸರಿಯಾಗಿ ಸಿಲಿಂಡರ್ ವಿತರಿಸದೆ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರುತ್ತಿರುವುದರಿಂದ ತೊಂದರೆಯಾಗಿದೆ. ತಕ್ಷಣ ಗ್ಯಾಸ್ ವಿತರಕರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ತುಷಾರ ಹೊಸೂರ, 15 ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದರು.
ಕರವೇ ಜಿಲ್ಲಾ ವಕ್ತಾರ ಶಿವಾನಂದ ಪೂಜಾರ, ತಾಲೂಕು ಘಟಕದ ಅಧ್ಯಕ್ಷ ಗಿರೀಶ ಬಾರ್ಕಿ, ರಟ್ಟಿಹಳ್ಳಿ ಕರವೇ ಅಧ್ಯಕ್ಷ ಮಂಜುನಾಥ ಮುದಿಯಪ್ಪನವರ, ತಾಲೂಕು ಘಟಕದ ಕಾರ್ಯಕರ್ತರಾದ ಮಲ್ಲನಗೌಡ ಪುಟ್ಟಳ್ಳವರ, ಮಲ್ಲಿಕಾರ್ಜುನ ಶಿರಹಟ್ಟಿ, ಹಸನ್ ಸಾಬ ಬಳಿಗಾರ, ಹನುಮಂತಗೌಡ ಹಲಗೇರಿ, ಬಿ.ಎಚ್. ಬಣಕಾರ, ಪ್ರದೀಪ ಬಣಕಾರ, ಕಲ್ಲನಗೌಡ ಕರೇಗೌಡ್ರ, ಮಂಜುನಾಥ ಆರಿಕಟ್ಟಿ, ಬೂದೇಶಿ ಹರಿಜನ, ಬಸವರಾಜ ಹೊಸಕಟ್ಟಿ, ಕಲ್ಲೇಶ ಸುಣಗಾರ, ಗಿರೀಶ ಪಾಟೀಲ, ಪ್ರವೀಣ ಹೊಸಮನಿ, ಮುರಳಿ ಪಾಟೀಲ, ರಾಮಣ್ಣ ಕಡೂರ, ಗಂಗಾಧರ ಮೆಣಸಿನಕಾಯಿ, ಮಲ್ಲೇಶ ಹೊಟ್ಟೇರ, ಈಶ್ವರ ಪುರದಕೇರಿ, ರಾಘು ಉಜ್ಜಪ್ಪಳವರ, ರಮೇಶ ಉಕ್ಕಡಗಾತ್ರಿ, ರಂಗಪ್ಪ ರಟ್ಟಿಹಳ್ಳಿ, ಪ್ರವೀಣ ಜೀನಳ್ಳಿ, ಗಿರೀಶ ಭೋವಿ, ನಾಗರಾಜ, ಮಂಜು ಹಳ್ಳಳ್ಳಿ, ಕೆಂಚಪ್ಪ ಕರುಬರ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement