ಇಂದು ವಿದ್ಯುತ್ ವ್ಯತ್ಯಯ
ರಾಣಿಬೆನ್ನೂರು: ನಗರದ ಹಲಗೇರಿ ರಸ್ತೆಯಲ್ಲಿರುವ 220 ಕೆವಿ ವಿದ್ಯುತ್ ವಿತರಣ ಕೇಂದ್ರದಿಂದ ಹೊರಡುವ ಎಫ್ 15 ಮತ್ತು ಎಫ್ 13 ವಿದ್ಯುತ್ ವಿತರಣ ಕೇಂದ್ರದ ಮಾರ್ಗಗಳಲ್ಲಿ ತುರ್ತು ಕಾಮಗಾರಿ ನಿರ್ವಹಿಸಬೇಕಾಗಿದ್ದು, ಮಾರುತಿ ನಗರ, ವೀರಭದ್ರೇಶ್ವರ ನಗರ, ಮಿನಿ ವಿಧಾನಸೌಧ, ಸಿದ್ದೇಶ್ವರ ನಗರ, ಕೋಟೆ ಪ್ರದೇಶ ಹಾಗೂ ದೇವರಗುಡ್ಡ ರಸ್ತೆಯಲ್ಲಿ ಆ. 22ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.
ರಕ್ಷಾಬಂಧನ ಆಚರಣೆ
ರಾಣಿಬೆನ್ನೂರು: ರಕ್ಷಾ ಬಂಧನ ಹಬ್ಬದ ನಿಮಿತ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ತಾಲೂಕು ಘಟಕದ ಕಾರ್ಯಕರ್ತರು ನಗರದ ಬಸ್ ಮತ್ತು ರೇಲ್ವೆ ನಿಲ್ದಾಣ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ರಾಖಿ ಕಟ್ಟಿ, ಸಿಹಿ ಹಂಚಿದರು. ಎಜೆಎಂವಿ ಮಹಿಳಾ ಕಾಲೇಜು ಮುಂತಾದೆಡೆ ವಿದ್ಯಾರ್ಥಿನಿಯರು ಮತ್ತು ಎಬಿವಿಪಿ ಕಾರ್ಯಕರ್ತರಾದ ತೇಜೇಶ ಎಚ್.ಎಸ್., ವಿದ್ಯಾರ್ಥಿ ಪರಿಷತ್‌ನ ಮುಖಂಡರಾದ ಚೇತನ ನಂದಿಹಳ್ಳಿ, ಉಷಾ ಬಣಕಾರ, ಸುಮಾ ಮೇಲ್ಮಾಳಗಿ, ರಮ್ಯಾ ಹಾದಿಮನಿ ಇದ್ದರು.
31ಕ್ಕೆ ಚಿತ್ರಕಲಾ ಸ್ಪರ್ಧೆ
ಹಾವೇರಿ: ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚಿಸಿ, ಸೃಜನಶೀಲ ಅಭಿವ್ಯಕ್ತಿ ಚುರುಕುಗೊಳಿಸಲು ಹಾವೇರಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಆ. 31ರಂದು ಬೆಳಗ್ಗೆ 10 ಗಂಟೆಗೆ ನಗರದ ಸರ್ಕಾರಿ ಕನ್ನಡ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಶಾಲಾ ಮಟ್ಟದಲ್ಲಿ ಆಯ್ಕೆಯಾದ ಮೂವರು ವಿದ್ಯಾರ್ಥಿಗಳು ಅರ್ಹರು. ಸ್ಪರ್ಧಿಗಳಿಗೆ ಡ್ರಾಯಿಂಗ್ ಪೇಪರ್ ನೀಡಲಾಗುವುದು. ಬಣ್ಣ ಹಾಗೂ ಇತರ ಸಲಕರಣೆಗಳನ್ನು ವಿದ್ಯಾರ್ಥಿಗಳೇ ತರಬೇಕು. ಪ್ರಕೃತಿ ವಿಕೋಪ (ನೆರೆಹಾವಳಿ), ಕೂಲಿಯಿಂದ ಶಾಲೆಗೆ, ಹಳ್ಳಿಯ ಜೀವನ, ಪರಿಸರ ಮಾಲಿನ್ಯ, ಭಯೋತ್ಪಾದನೆ ಕುರಿತು ಚಿತ್ರ ಬಿಡಿಸಬಹುದು ಎಂದು ತಿಳಿಸಿದ್ದಾರೆ.
ಪ್ರೋತ್ಸಾಹಧನಕ್ಕೆ ಆಹ್ವಾನ
ಹಾವೇರಿ: ಪ್ರಸಕ್ತ ಸಾಲಿನಲ್ಲಿ ಪಿಯುಸಿ, ಪದವಿ ಹಾಗೂ ತತ್ಸಮಾನ ಪರೀಕ್ಷೆಗಳಲ್ಲಿ ಪ್ರಥಮ ಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ-ವರ್ಗದ ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರು ಮಾಡಲು ಆನ್‌ಲೈನ್‌ನಲ್ಲಿ (ಢಿಢಿಢಿ.ಡಢಿ.್ಞಛ್ಠ.ಟ್ಝ್ಛಿ.್ಝಟಿ, ಢಿಢಿಢಿ.ಡಢಿ.್ಞಛ್ಠ.ಟ್ಝ್ಛಿ.್ಝಟಿ) ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ, ಡಿಇಡಿ ಹಾಗೂ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ರು. 750, ಪದವಿ ಕೋರ್ಸ್ ಪೂರೈಸಿದವರಿಗೆ ರು. 1000, ಸ್ನಾತಕೋತ್ತರ ಪದವೀಧರರಿಗೆ ರು. 1250 ಹಾಗೂ ತಾಂತ್ರಿಕ, ಕೃಷಿ, ವೈದ್ಯಕೀಯ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೆ ರು. 1500 ಬಹುಮಾನದ ಹಣ ನೀಡಲಾಗುವುದು. ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಸ್ವೀಕೃತಿ ಪತ್ರದೊಂದಿಗೆ ದೃಢೀಕರಿಸಿದ ಅಂಕಪಟ್ಟಿ, ಜಾತಿ-ಆದಾಯ ಪ್ರಮಾಣಪತ್ರ ಲಗತ್ತಿಸಿ, ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಮಾಹಿತಿಗೆ ದೂ. 08375-234220 ಸಂಪರ್ಕಿಸಬಹುದು.