ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಎಬಿವಿಪಿಯಿಂದ ಸಾಮೂಹಿಕ ರಕ್ಷಾಬಂಧನ

Lingaraj Badiger
Updated On : 22 Aug 2013, 11:32 am

ಹಾವೇರಿ: ನಗರದ ಎಲ್ಲ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಬುಧವಾರ ಆಚರಿಸಲಾಯಿತು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ ಮಾತನಾಡಿ, ರಕ್ಷಾ ಬಂಧನದ ಉದ್ದೇಶ ಭ್ರಾತೃತ್ವ ಬೆಳೆಸುವುದು ಮಾತ್ರವಲ್ಲದೆ, ದೇಶದ ಸಂಸ್ಕೃತಿ ಉಳಿಸುವುದರಲ್ಲೂ ಅದು ಮಹತ್ವದಪಾತ್ರ ವಹಿಸುತ್ತದೆ. ಪರಸ್ಪರ ರಕ್ಷಣೆ ಮಾಡುವ ಜತೆಗೆ ದೇಶದ ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯವಾಗಬೇಕು ಎಂದರು.
ಎಸ್.ವಿ. ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳಿಗೆ ರಾಖಿ ಕಟ್ಟಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರೇವಣಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯೆ ಗೌರಿ, ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ ಆಗಮಿಸಿದ್ದರು. ವಿದ್ಯಾರ್ಥಿ ಮುಖಂಡರಾದ ವೀಣಾ, ಅನ್ನಪೂರ್ಣಾ, ಗಣೇಶ ಅಂಬಲಿ, ಪುಟ್ಟರಾಜ, ನಾಗರಾಜ ಹುರಳಿಕುಪ್ಪಿ ಪಾಲ್ಗೊಂಡಿದ್ದರು.
--
ಹೈನುಗಾರಿಕೆಯಿಂದ ನಿರಂತರ ಆದಾಯ: ಮಾಳಂಜಿ
ಶಿಗ್ಗಾಂವಿ: ರಾಷ್ಟ್ರದ ಆರ್ಥಿಕತೆಯಲ್ಲಿ ಹೈನುಗಾರಿಕೆ ವಿಶಿಷ್ಟ ಸ್ಥಾನ ಹೊಂದಿದೆ. ಪೌಷ್ಟಿಕ ಆಹಾರ ಒದಗಿಸುವ ಜತೆಗೆ ಕೃಷಿಗೆ ಪೂರಕವಾಗಿ ಉತ್ತಮ ಉದ್ಯೋಗವಾಗಿದೆ. ಇದು ವರ್ಷವಿಡಿ ನಿರಂತರ ಆದಾಯ ತರಬಲ್ಲದು ಎಂದು ಶಿಗ್ಗಾಂವಿ-ಸವಣೂರು ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಣಪತಿ ಮಾಳಂಜಿ ಹೇಳಿದರು.
ಸವಣೂರ ತಾಲೂಕಿನ ಮಾವೂರ ಗ್ರಾಮದಲ್ಲಿ ಸವಣೂರು ವಲಯದ ಮಾವೂರ ಮತ್ತು ಹತ್ತಿಮತ್ತೂರ ವಲಯದ ಕಲಿವಾಳ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ವಂತಿಗೆ ಸಹಾಯಧನದ ತಲಾ ರು. 50 ಸಾವಿರಗಳ ಚೆಕ್ ವಿತರಿಸಿದ ಅವರು, ಹೈನುಗಾರಿಕೆ ಕ್ಷೀಣಿಸುತ್ತಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಫಲಾನುಭವಿಗಳಿಗೆ ಹೈನುಗಾರಿಕೆ ತರಬೇತಿಗಳನ್ನು ನೀಡಲಾಗುತ್ತಿದೆ. ಉತ್ಪಾದನೆಯಾದ ಹಾಲಿಗೆ ಯೋಗ್ಯ ಬೆಲೆ ಕೊಡಿಸುವ ಉದ್ದೇಶದಿಂದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡಗಳಿಗೆ ಸಹಾಯಧನ ನೀಡುತ್ತಿದ್ದೇವೆ ಎಂದರು.
ಯೋಜನೆಯ ಹೈನುಗಾರಿಕೆ ಅಧಿಕಾರಿ ಪ್ರವೀಣ ದೊಡಮನಿ, ವಲಯದ ಮೇಲ್ವಿಚಾರಕರು, ಎಒಇ ಅಧ್ಯಕ್ಷ ವೀರಣ್ಣ ಮೂಲಶೆಟ್ಟರ, ಕಾರ್ಯದರ್ಶಿ ಬಸವರಾಜ ಶೀಲವಂತರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement