ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಮಾಜದ ಅಭಿವೃದ್ಧಿಗೆ ದುಡಿಯೋಣ

Lingaraj Badiger
Updated On : 22 Aug 2013, 11:32 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಆ. 21
ಸಮಾಜ ನನಗೇನು ಕೊಟ್ಟಿದೆ ಎಂದು ಕೇಳುವುದಕ್ಕಿಂತ ಸಮಾಜಕ್ಕಾಗಿ ನಾನೇನು ಕೊಡುಗೆ ನೀಡಿದ್ದೇನೆಂದು ವಿಚಾರಿಸುವ ಮೂಲಕ ಎಲ್ಲರೂ ದುಡಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರಾಜ್ಯ ವಿಶ್ವಕರ್ಮ ಸಮಾಜದ ಮುಖಂಡ ಕೆ.ಪಿ. ನಂಜುಂಡಿ ನುಡಿದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು, ತಾಲೂಕು ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘ ರಾಣಿಬೆನ್ನೂರು ಆಶ್ರಯದಲ್ಲಿ ನಗರದ ಕುರುಬಗೇರಿ ಕ್ರಾಸ್‌ನಲ್ಲಿರುವ ಮೌನೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ವಿಶ್ವಕರ್ಮ ಸಮಾಜದ ತಾಲೂಕು ಸಭೆಯಲ್ಲಿ ಸಮಾಜ ಬಾಂಧವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪಂಚ ಕಸುಬುಗಳಲ್ಲಿ ಒಂದಾಗಿ ಗುರುತಿಸಿಕೊಂಡ ವಿಶ್ವಕರ್ಮರು ಇತರ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಂದಿನ ಜನಗಣತಿಯ ಜಾತಿ ಕಲಂನಲ್ಲಿ ಎಲ್ಲರೂ ವಿಶ್ವಕರ್ಮ ಎಂದು ಬರೆಯಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ವಿಶ್ವಕರ್ಮ ಸಮಾಜ ಅಭಿವೃದ್ಧಿಗಾಗಿ ರು. 5 ಕೋಟಿ ಮೀಸಲಿಟ್ಟಿದ್ದಾರೆ. ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಹಾಗೂ ಸಿದ್ದರಾಮಯ್ಯ ಅಭಿನಂದನಾರ್ಹರು. ಸೆ. 17ರಂದು ಬೆಂಗಳೂರಿನಲ್ಲಿ ವಿಶ್ವಕರ್ಮ ಪೂಜೆ ನಡೆಯಲಿದ್ದು, ಎಲ್ಲರೂ ಆಗಮಿಸಬೇಕೆಂದು ತಿಳಿಸಿದರು.
ಎಚ್.ಎನ್. ಅರ್ಕಾಚಾರಿ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿಯ ಮನೋಹರ ಲಕ್ಕುಂಡಿ, ಧಾರವಾಡದ ಶಿವಣ್ಣ ಬಡಿಗೇರ, ತಾಲೂಕು ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಠ್ಠಲಾಚಾರ ಬಡಿಗೇರ, ಹಿರೇಕೆರೂರಿನ ಜಕಣಾಚಾರ ಅರ್ಕಾಚಾರಿ, ಡಾ೤ ಪಿ.ಇ. ಮಾಯಾಚಾರ, ಸುಭಾಸ್ ಪೋತದಾರ, ಹಾವೇರಿಯ ಕೃಷ್ಣಪ್ಪ ಅರ್ಕಾಚಾರಿ, ಬ್ಯಾಡಗಿಯ ಪ್ರಭಾವತಿ ಅರ್ಕಾಚಾರಿ, ಜಕಣಾಚಾರಿ ಬಡಿಗೇರ ಮಾತನಾಡಿದರು.
ಹುಲಗೂರು ಮಠದ ವೆಂಕಟೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement