ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಂಚೆ ಕೋರ್ ಬ್ಯಾಂಕಿಂಗ್ ಶೀಘ್ರ ಆರಂಭ: ಬಂಗಿಗೌಡ್ರ

Lingaraj Badiger
Updated On : 23 Aug 2013, 12:40 pm

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಆ. 22
ಹಾವೇರಿಯ ಅಂಚೆ ಇಲಾಖೆಯಲ್ಲಿ ಶೀಘ್ರದಲ್ಲೇ ಹೊಸ ಯೋಜನೆಗಳಾದ ಅಂಚೆ ಕೋರ್ ಬ್ಯಾಂಕ್ ಮುಂತಾದ ಸೇವೆಗಳನ್ನು ನೀಡುವುದಾಗಿ ಶಿಗ್ಗಾಂವಿ ಅಂಚೆ ನಿರೀಕ್ಷಕ ಎನ್.ಜಿ. ಬಂಗಿಗೌಡ್ರ ಹೇಳಿದರು.
ಪಟ್ಟಣದ ಮಾಮ್ಲೆದೇಸಾಯಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಗ್ಗಾಂವಿಯ ಅಂಚೆ ಮಹಾ ಮೇಳವನ್ನು ಉದ್ಘಾಟಿಸಿದ ಅವರು, ಗ್ರಾಹಕರಿಗೆ ತ್ವರಿತ ಗತಿಯಲ್ಲಿ ಸೇವೆ ನೀಡಲು ಅಂಚೆ ಇಲಾಖೆಯನ್ನು ಆಧುನೀಕರಣಗೊಳಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಪಿ.ಎಸ್. ಹಕೀಂ 'ವ್ಯಕ್ತಿತ್ವ ವಿಕಸನ ಮತ್ತು ಯಶಸ್ಸಿನ ದಾರಿ' ಕುರಿತು ಉಪನ್ಯಾಸ ನೀಡಿದರು. ದೂರು ನಿರೀಕ್ಷಕ ಜಾಫರಸಾಬ ಮ್ಯಾಗೇರಿ ಆಡಳಿತ ಬದಲಾವಣೆ ಕುರಿತು ಮಾತನಾಡಿದರು. ಎಸ್‌ಪಿಎಂಗಳಾದ ಜಯರಾಮ ನಾಯಕ್ (ಹಾನಗಲ್), ಕೆ.ಎಚ್. ನಾಯಕ್ (ಶಿಗ್ಗಾಂವಿ), ಪಿ.ಜಿ. ಮಠದ (ಸವಣೂರ) ಹಾಗೂ ಹಾವೇರಿಯ ಸಹಾಯಕ ಅಂಚೆ ಅಧೀಕ್ಷಕ ಎಂ.ವಿ. ಬಸಾಪುರ  ಆಗಮಿಸಿದ್ದರು. ಯಲ್ಲಪ್ಪ ಗೋಣೆಪ್ಪನವರ ನಿರೂಪಿಸಿದರು. ಎಸ್.ಎಸ್. ಗಾಜಿಪುರ ವಂದಿಸಿದರು.

--
29ರಂದು ಗಾಯತ್ರಿ ಪೂರ್ವಕ ಮಹಾಲಕ್ಷ್ಮಿ ಹೋಮ
ರಾಣಿಬೆನ್ನೂರು: ಭಕ್ತರ ಅಭೀಷ್ಟ ಸಿದ್ಧಿಗಾಗಿ ನಗರದ ಸಂಗಮ್ ಚಿತ್ರಮಂದಿರದ ಪಕ್ಕದ ರಂಗನಾಥ ನಗರದ ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆ. 29ರಂದು ಬೆಳಗ್ಗೆ 8 ಗಂಟೆಗೆ ಗಾಯಿತ್ರಿ ಪೂರ್ವಕ ಮಹಾಲಕ್ಷ್ಮಿ ಹೋಮವನ್ನು ನಡೆಸಲು ದೇವಸ್ದಾನ ಸಮಿತಿ ನಿರ್ಧರಿಸಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವಿ.ವಿ. ಹರಪನಹಳ್ಳಿ ಅವರನ್ನು (ಮೊ. 9986765584, 9980862003) ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement