ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪ್ರತಿಭಾ ಪರೀಕ್ಷೆ: ಸೂಚನೆ

Lingaraj Badiger
Updated On : 23 Aug 2013, 12:40 pm

ಹಾನಗಲ್ಲ: ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಒಲಂಪಿಯಾಡ್, ಎನ್‌ಟಿಎಸ್ಸಿ, ಎನ್‌ಎಂಎಂಎಸ್ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆಯುವಂತೆ ಕಾಳಜಿ ವಹಿಸಲು ಶಿಕ್ಷಕ ಸಮುದಾಯಕ್ಕೆ ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದ್ದಾರೆ.
ಸುದ್ದಿಗಾರರಿಗೆ ಈ ವಿವರ ನೀಡಿದ ಅವರು, ಒಲಂಪಿಯಾಡ್ ಪರೀಕ್ಷೆ ರಾಜ್ಯ ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 6 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ವಿಷಯಗಳಲ್ಲಿ ನಡೆಯುತ್ತದೆ. ಶಾಲಾ ಹಂತದಲ್ಲಿ ಆ. 31, ತಾಲೂಕು ಮಟ್ಟದಲ್ಲಿ ಸೆ. 21, ಜಿಲ್ಲಾ ಮಟ್ಟದಲ್ಲಿ ನ. 8 ಹಾಗೂ ರಾದ್ಯ ಮಟ್ಟದಲ್ಲಿ ಡಿಸೆಂಬರ್ ತಿಂಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ತಾಲೂಕಿನಲ್ಲಿ 6ನೇ ತರಗತಿಯ 3354 ಹಾಗೂ 9ನೇ ತರಗತಿಯ 1997 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಪ್ರತಿ ಶಾಲೆಯಿಂದ ಐವರು ವಿದ್ಯಾರ್ಥಿಗಳನ್ನು ತಾಲೂಕು ಮಟ್ಟಕ್ಕೆ ಆಯ್ಕೆ ಮಾಡಬೇಕು. ತಾಲೂಕು ಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದ ಶೇ. 5ರಷ್ಟು ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ, ಜಿಲ್ಲಾ ಮಟ್ಟದಿಂದ ಶೇ. 10ರಷ್ಟು ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ ಲ್ಯಾಪ್‌ಟಾಪ್ ನೀಡಲಾಗುವುದು. ರಾಜ್ಯ ಮಟ್ಟದಲ್ಲಿ ಮೂರು ಬಹುಮಾನಗಳಿದ್ದು, ಶಾಲೆಗೆ ರೋಲಿಂಗ್ ಶೀಲ್ಡ್ ನೀಡಲಾಗುತ್ತದೆ ಎಂದರು.
ಎನ್‌ಟಿಎಸ್‌ಸಿ ಪರೀಕ್ಷೆ
ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ 10ನೇ ತರಗತಿ ಮಕ್ಕಳಿಗೆ ನಡೆಯುತ್ತದೆ. ಮೊದಲ ಹಂತದಲ್ಲಿ ನ. 17ರಂದು ಪರೀಕ್ಷೆ. ಆಸಕ್ತರು ಸೆ. 10ರೊಳಗಾಗಿ ಬಿಇಓ ಕಚೇರಿಯಿಂದ ಉಚಿತವಾಗಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಪರಿಶಿಷ್ಟ ವಿದ್ಯಾರ್ಥಿಗಳಿಗೆ ರು. 25, ಇತರರಿಗೆ ರು. 100 ಪರೀಕ್ಷಾ ಶುಲ್ಕವಿದೆ. ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (ಜೀ ಮ್ಯಾಟ್- 50 ಅಂಕ), ಆಂಗ್ಲ ಭಾಷಾ ಸಾಮರ್ಥ್ಯ ಪರೀಕ್ಷೆ (40 ಅಂಕ), ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (90 ಅಂಕ) ಇರುತ್ತದೆ. ಪರೀಕ್ಷೆಯಲ್ಲಿ ಪಾಸಾದವರಿಗೆ ಪಿಯುಸಿಯಿಂದ ಪದವಿ ತನಕ ಪ್ರತಿ ತಿಂಗಳು ರು. 500 ಶಿಷ್ಯವೇತನ ನೀಡಲಾಗುತ್ತದೆ.
ಎನ್‌ಎಂಎಂಎಸ್ ಪರೀಕ್ಷೆ: ನ್ಯಾಶನಲ್ ಮೀನ್ಸ್ ಕಂ ಮೆರಿಟ್ ವಿದ್ಯಾರ್ಥಿ ವೇತನ ಪರೀಕ್ಷೆ 8ನೇ ತರಗತಿ ಮಕ್ಕಳಿಗೆ ನ. 17ರಂದು ನಡೆಯುತ್ತದೆ. ಬಿಇಓ ಕಚೇರಿಯಿಂದ ಅರ್ಜಿ ಪಡೆದು, ಸೆ. 10ರೊಳಗೆ ಭರ್ತಿ ಮಾಡಿ ಸಲ್ಲಿಸಬೇಕು. ಪಾಸಾದವರಿಗೆ 9ನೇ ತರಗತಿಯಿಂದ ಪಿಯುಸಿ ವರೆಗೆ ಪ್ರತಿ ತಿಂಗಳು ರು. 500 ಶಿಷ್ಯವೇತನ ನೀಡಲಾಗುತ್ತದೆ ಎಂದು ಸಾಲಿಮಠ ತಿಳಿಸಿದ್ದಾರೆ.

--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement