ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನೂರು ಮಾತು ಬಿಂಬಿಸುವ ಹಾಡು

Lingaraj Badiger
Updated On : 24 Aug 2013, 12:11 pm

ಹಾನಗಲ್ಲ: ನಮ್ಮೊಳಗಿನ ನೂರು ಮಾತುಗಳನ್ನು ಒಂದೇ ಹಾಡಿನಲ್ಲಿ ಬಿಂಬಿಸುವ ಶಕ್ತಿ ಜನಪದಕ್ಕಿದೆ. ಟೀವಿ ಕಾಲದಲ್ಲಿ ಜನಪದ ಸಾಹಿತ್ಯ ಗುಡ್ಡ ಬೆಟ್ಟ ಸೇರುವಂತಾಗಬಾರದು ಎಂದು ಜನಪದ ಹಾಡುಗಳ ಮೂಲಕ ಜನಮನದ ಹೃದಯ ಗೆದ್ದ ಕಲಾವಿದ ಫಕ್ಕೀರಪ್ಪ ಜೋಗಿ ಹೇಳಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ 'ನಮ್ಮ ಜನಪದ ಹಾಡುಗಳು' ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಿನ ಬನವಾಸಿಯ ಫಕ್ಕೀರಪ್ಪ ಜೋಗಿ ಭಕ್ತಿಗೀತೆ, ಜನಪದ ಹಾಡು, ಕಿನ್ನರಜೋಗಿ, ಶಿಶುವಿನಹಾಳ ಶರೀಫ ಶಿವಯೋಗಿಗಳ ರಚನೆಗಳನ್ನು ಹಾಡಿದರು. ಲಾವಣಿ ತ್ರಿಪದಿಗಳು ಸಹೃದಯರ ಮನ ಗೆದ್ದವು.
ಸಾಹಿತಿ ಪ್ರೊ೤ ಮಾರುತಿ ಶಿಡ್ಲಾಪುರ ಮಾತನಾಡಿ, ನಮ್ಮೊಳಗಿನ ಆಗುಹೋಗುಗಳ ಆಂತರ್ಯವನ್ನು ಬಿಚ್ಚಿಡುವ ಜನಪದ ಸಾಹಿತ್ಯ ಸಹಜವಾಗಿಯೇ ನಮ್ಮ ಹಾಡುಗಳಾಗುತ್ತವೆ. ಅತ್ಯಂತ ಸರಳ, ಸುಲಭ  ಹಾಗೂ ರಸವತ್ತಾಗಿ ನಮ್ಮ ಬದುಕಿನ ವಿವಿಧ ಮಜಲುಗಳನ್ನು ತೆರೆದಿಡುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಸಿ. ಪೀರಜಾದೆ , ಜನಪದ ಸಂಸ್ಕೃತಿ ಪುನರುತ್ಥಾನಗೊಳಿಸುವ, ಜನಪದ ಕಲಾವಿದರನ್ನು ಪ್ರೋತ್ಸಾಹಿಸವ ಅಗತ್ಯವಿದೆ. ಈ ಮೂಲಕ ಜನಪದ ಸಂಸ್ಕೃತಿ ಮತ್ತೆ ನಮ್ಮದಾಗಬೇಕು ಎಂದರು.
ಉಪನ್ಯಾಸಕರಾದ ಎಸ್.ಬಿ. ಕಮಾಟಿ, ಟಿ. ಈಶ್ವರ, ರಶ್ಮಿ, ವಿ.ಯು. ಪಾಟೀಲ, ವೀಣಾ ದೇವರಗುಡಿ, ಹೊನ್ನತ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement