ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಮಾಜಕ್ಕೆ ಮಾರ್ಗದರ್ಶಿಗಳಾಗಿ: ನಾಯಕ್

Mainashree
Updated On : 25 Aug 2013, 12:38 pm

ಹಾವೇರಿ: ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಯುವದಳದ ಕಾರ್ಯಕರ್ತರು ಸಮಾಜಕ್ಕೆ ಮಾರ್ಗದರ್ಶಿಗಳಾಗಬೇಕೆಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಗಣೇಶ ನಾಯಕ್ ಹೇಳಿದರು.
ದೇವಿಹೊಸೂರಲ್ಲಿ ಶನಿವಾರ ಹಾವೇರಿಯ ನೆಹರು ಯುವ ಕೇಂದ್ರ ಮತ್ತು ದೇವಿಹೊಸೂರ ಕೃಷಿ ತರಬೇತಿ ಕೇಂದ್ರದ ಆಶ್ರಯದಲ್ಲಿ ಅಂತರ್ ಜಿಲ್ಲಾ ರಾಷ್ಟ್ರೀಯ ಸೇವಾದಳದ ಕಾರ್ಯಕರ್ತರ ತರಬೇತಿ ಉದ್ಘಾಟಿಸಿ, ನಾವು ಸ್ವಾವಲಂಬಿಗಳಾಗಿ ಸಮಾಜಕ್ಕೆ ಮಾದರಿಯಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ತರಬೇತಿ ಕೇಂದ್ರದ ಉಪ ನಿರ್ದೇಶಕಿ ದೇವಿಕಾ ಆರ್., ಯುವ ಜನರು ಹಿರಿದಾದ ಗುರಿ ಇಟ್ಟುಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಅಧ್ಯಯನಶೀಲರಾಗಿ ಛಲಬಿಡದೆ ಗುರಿ ಸಾಧಿಸಿ, ದೇಶದ ಅಮೂಲ್ಯ ಸಂಪನ್ಮೂಲ ಎನಿಸಬೇಕು ಎಂದರು.
ಮುಖ್ಯ ಅತಿಥಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಎಸ್.ಎಚ್. ಮಜೀದ್, ಗ್ರಾಮೀಣ ಪ್ರದೇಶದ ಯುವ ಜನರ ಹೊಣೆಗಾರಿಕೆ ನೆನಪಿಸಿದರು. ಸುಭದ್ರ ರಾಷ್ಟ್ರ, ಜಾತ್ಯತೀತ ಸಮಾಜ ಯುವ ಜನತೆಯಿಂದ ಮಾತ್ರ ಸಾಧ್ಯ. ದೇಶದ ಅಭಿವೃದ್ಧಿ ಯುವ ಜನತೆ ಕೈಯಲ್ಲಿದೆ ಎಂದರು.
ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಎಸ್.ಯು. ಜಮಾದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. 10 ದಿನಗಳ ಕಾಲ ನಡೆಯುವ ಈ ತರಬೇತಿಯಲ್ಲಿ ರಾಷ್ಟ್ರೀಯ ಯುವಜನರ ಯೋಜನೆ, ಗ್ರಾಮೀಣ ಅಭಿವೃದ್ಧಿಯಲ್ಲಿ ಯುವ ಜನರ ಪಾತ್ರ, ವ್ಯಕ್ತಿತ್ವ ವಿಕಾಸ ತರಬೇತಿ, ರಾಷ್ಟ್ರೀಯ ಮೌಲ್ಯಗಳ, ಯುವಕ / ಯುವತಿಯರ ಸಂಘಗಳ ರಚನೆ, ಆದಾಯೋತ್ಪನ್ನ ಚಟುವಟಿಕೆ, ಸಮುದಾಯದಲ್ಲಿ ಕಾರ್ಯನಿರ್ವಹಣೆ, ಸಂವಿಧಾನದ ಮೂಲಭೂತ ಹಕ್ಕುಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದರು.
ಮುತ್ತುರಾಜ್ ಮಾದರ್, ಚೈತನ್ಯ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಪಿ.ಎಸ್. ಹಕೀಂ ಹಾಗೂ ಕಾವೇರಿ ಇದ್ದರು. ಟಿ. ರಾಜಪ್ಪ ನಿರೂಪಿಸಿದರು. ಎ.ಜೆ. ಪುರಾಣಿಕ ವಂದಿಸಿದರು. ಹಾವೇರಿ, ಶಿವಮೊಗ್ಗ, ಗದಗ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ 50 ಮಂದಿ ರಾಷ್ಟ್ರೀಯ ಯುವದಳ ಕಾರ್ಯಕರ್ತರು ಭಾಗವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement