ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 25 Aug 2013, 12:37 pm

ಇಂದಿನಿಂದ ಕೃಷ್ಣಾಷ್ಟಮಿ
ಹಾವೇರಿ: ನಗರದ ಶ್ರೀ ವಿಶ್ವೇಶತೀರ್ಥ ನಗರದಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಸೇವಾ ಟ್ರಸ್ಟ್ ವತಿಯಿಂದ ಆ. 25ರಿಂದ 29ರ ವರೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು. ಆ. 25ರಿಂದ 27ರ ವರೆಗೆ ನಿತ್ಯ ಸಂಜೆ 6.30ರಿಂದ 8.30ರ ವರೆಗೆ ಪಂ. ಗುರುರಾಜಾಚಾರ್ಯ ಗಲಗಲಿ ಅವರಿಂದ ಪ್ರವಚನ ಏರ್ಪಡಿಸಲಾಗಿದೆ. 28ರಂದು ಸಂಜೆ 6.30ರಿಂದ 9.30ರ ವರೆಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ಹುಸೇನಸಾಬ ಕನಕಗಿರಿ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ. 28ರ ರಾತ್ರಿ 12:07ಕ್ಕೆ ಶ್ರೀ ಕೃಷ್ಣನನ್ನು ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ, ಅನಂತರ ಪೂಜೆ, ಅರ್ಘ್ಯ, ಅಷ್ಟಾವಧಾನ, ತೀರ್ಥ ಹಾಗೂ ಪ್ರಸಾದ ಕಾರ್ಯಕ್ರಮವಿದೆ. ಎಲ್ಲ ಭಕ್ತರೂ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ಶ್ರೀ ವೆಂಕಟೇಶ್ವರ ಸೇವಾ ಟ್ರಸ್ಟ್‌ನ ಧರ್ಮದರ್ಶಿ ರಂಗರಾವ್ ಮೊಕ್ತಾಲಿ ತಿಳಿಸಿದ್ದಾರೆ.
ಸ್ವಉದ್ಯೋಗ ಯೋಜನೆಗೆ ಅರ್ಜಿ ಆಹ್ವಾನ
ಹಾವೇರಿ: ಪ್ರಸಕ್ತ ಸಾಲಿನಲ್ಲಿ ಡಾ೤ ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳಡಿ, ಸಾಲ ಸೌಲಭ್ಯಕ್ಕಾಗಿ ಪರಿಶಿಷ್ಟ ಜಾತಿ ಫಲಾನುಭವಿಗಳು ಸೆ. 19ರೊಳಗಾಗಿ ಅರ್ಜಿ ಸಲ್ಲಿಸಬೇಕು. ಸ್ವಉದ್ಯೋಗ / ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಸಫಾಯಿ ಕರ್ಮಚಾರಿ ಪುನರ್ವಸತಿ ಯೋಜನೆ, ಗಂಗಾ ಕಲ್ಯಾಣ, ವೈಯಕ್ತಿಕ ನೀರವಾರಿ ಕೊಳವೆ ಬಾವಿ ಯೋಜನೆ,  ಭೂ ಒಡೆತನ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ ಹಾಗೂ ನೇರ ಸಾಲ ಯೋಜನೆಗಳಿಗೆ ಈ ಸೌಲಭ್ಯವಿದೆ. ಆಸಕ್ತರು ನಿಗಮದ ಜಿಲ್ಲಾ ಕಚೇರಿ ಅಥವಾ ಸಮಾಜ ಕಲ್ಯಾಣ ಇಲಾಖೆಯ ಅಭಿವೃದ್ಧಿ ಅಧಿಕಾರಿಗಳಿಂದ ನಿಗದಿತ ನಮೂನೆಯ ಅರ್ಜಿ ಪಡೆದು, ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ - ಜಿಲ್ಲಾ ವ್ಯವಸ್ಥಾಪಕರು, ಡಾ೤ ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ನಂ. 18, ಬಿ ಬ್ಲಾಕ್, ಜಿಲ್ಲಾ ಆಡಳಿತ ಭವನ, ಹಾವೇರಿ-ಈ ವಿಳಾಸಕ್ಕೆ ಸಲ್ಲಿಸಬೇಕು. ಈ ಹಿಂದೆ ಅರ್ಜಿ ಸಲ್ಲಿಸಿ ಸೌಲಭ್ಯ ಸಿಗದಿದ್ದವರೂ ಸಲ್ಲಿಸಬಹುದು. ಮಾಹಿತಿಗೆ ದೂ. 08375-249012 ಸಂಪರ್ಕಿಸಿ.
ಬೈಕ್ ಉರುಳಿ ಸಾವು
ಶಿಗ್ಗಾಂವಿ: ಬೈಕ್ ಪಲ್ಟಿಯಾಗಿ ಸ್ಥಳದಲ್ಲಿ ಓರ್ವ ಮೃತಪಟ್ಟು, ಮತ್ತೊಬ್ಬ ಗಾಯಗೊಂಡ ಘಟನೆ ತಾಲೂಕಿನ ಬಂಕಾಪುರ ಬಳಿ ಹೆದ್ದಾರಿ ಮೇಲೆ ಗುರುವಾರ ರಾತ್ರಿ ನಡೆದಿದೆ. ಶಿಗ್ಗಾಂವಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ ಗುಡಗೂರ (38) ಮೃತ ವ್ಯಕ್ತಿ. ಮೂಲತಃ ಹಾವೇರಿ ತಾಲೂಕಿನ ಕಲ್ಲಿಹಾಳ ಗ್ರಾಮದ ಅವರು ಕರ್ತವ್ಯದ ಮೇಲೆ ಹಾವೇರಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ಶಿಗ್ಗಾಂವಿಗೆ ವಾಪಸ್ ಬರುವಾಗ ಬೈಕ್ ಪಲ್ಟಿಯಾಗಿ ಈ ಘಟನೆ ನಡೆದಿದೆ. ತೀವ್ರ ಗಾಯಗೊಂಡ ತಾಲೂಕಿನ ಕಂಕಣವಾಡ ಗ್ರಾಮದ ಪುರಸಭೆ ಪೌರ ಕಾರ್ಮಿಕ ಮಂಜಪ್ಪ ಮಾದರ ಎಂಬಾತನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಟು ವ,ರ್ಗಳಿಂದ ಉತ್ತಮ ಸೇವೆ ನೀಡಿದ್ದ ಆರೋಗ್ಯ ನಿರೀಕ್ಷಕ ಗುಡಗೂರ, ಜನ ಮೆಚ್ಚುಗೆಯ ಅಧಿಕಾರಿಯಾಗಿದ್ದರು. ಬಂಕಾಪುರ ಠಾಣೆ ಪಿಎಸ್‌ಐ ಆರ್.ವೈ. ಬಜಮ್ಮನವರ ದೂರು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement