ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕೃಷಿಯಿಂದ ಕಲೆ, ಸಾಹಿತ್ಯ, ಸಂಸ್ಕೃತಿ ಸೃಷ್ಟಿ

Mainashree
Updated On : 26 Aug 2013, 10:49 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಆ. 25
ನಮ್ಮ ಮೂಲ ಕಸಬು ಕೃಷಿ. ಅದರ ಮೂಲಕ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗಳು ರೂಪು ತಾಳಿದ್ದು, ಅವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾದ ಅಗತ್ಯವಿದೆ. ಜಾನಪದ ಸಂಶೋಧಕರಿಗೆ ಹೊಸತನವನ್ನು ಹುಡುಕುವ ಪ್ರವೃತ್ತಿ ಇರಬೇಕು ಎಂದು ಖ್ಯಾತ ಜಾನಪದ ವಿದ್ವಾಂಸ, ಸಂಶೋಧಕ ಕ್ಯಾತನಹಳ್ಳಿ ರಾಮಣ್ಣ ಪ್ರತಿಪಾದಿಸಿದರು.
ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಜಾನಪದ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಅವರು, ಸಂಸ್ಕೃತಿ ಕೃಷಿ ಪದ್ಧತಿಯಿಂದ ಉಗಮವಾಗಿದ್ದು, ಜಾನಪದದ ಮೂಲ ಬೇರುಗಳು ಇರುವುದು ಬೇಸಾಯ ಸಂಸ್ಕೃತಿಯಲ್ಲಿ ಎಂದು ಅಭಿಪ್ರಾಯಪಟ್ಟರು.
ಜಾನಪದ ವಿದ್ವಾಂಸ ಡಾ೤ ಯು.ಎಸ್. ರಾಮಣ್ಣ ಮಾತನಾಡಿ, ಗ್ರಾಮೀಣ ಜನರ ಸಮೃದ್ಧ ಬದುಕಿನ ಅನುಭವಗಳು ಅನಾವರಣಗೊಳ್ಳಬೇಕು. ರಂಗಭೂಮಿ ಹಾಗೂ ಜಾನಪದವನ್ನು ಕುರಿತು ತೌಲನಿಕ ಅಧ್ಯಯನ, ಸಂಶೋಧನೆ ಆಗಬೇಕು. ಈ ಹಿನ್ನೆಲೆಯಲ್ಲಿ ಜಾನಪದ ವಿಶ್ವವಿದ್ಯಾಲಯ ಮಹತ್ವದ ಕಾರ್ಯ ಯೋಜನೆಗಳನ್ನು ರೂಪಿಸಿ ವಿಶ್ವಮಟ್ಟದಲ್ಲಿ ಹೆಸರು ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಂಪನ್ಮೂಲ ಕ್ರೋಡೀಕರಣ
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ೤ ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಿ, ವಿಶ್ವವಿದ್ಯಾಲಯ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯಪ್ರವೃತ್ತಗೊಳ್ಳಲು ಅಗತ್ಯವಿರುವ ಆರ್ಥಿಕ ಹಾಗೂ ಮಾನವ ಸಂಪನ್ಮೂಲಗಳನ್ನು ಒದಗಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ೤ ಸಿ.ಎ. ಸೋಮಶೇಖರಪ್ಪ ಮಾತನಾಡಿದರು. ಕ್ಯಾತನಹಳ್ಳಿ ರಾಮಣ್ಣ ಹಾಗೂ ಡಾ೤ ಯು.ಎಸ್. ರಾಮಣ್ಣ ಅವರನ್ನು ವಿವಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಜಾನಪದ ವಿದ್ವಾಂಸರಾದ ಡಾ೤ ಎಂ.ಜಿ. ಈಶ್ವರಪ್ಪ ದಂಪತಿ, ವಿವಿಯ ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ೤ ಚಂದ್ರ ಪೂಜಾರಿ, ಡಾ೤ ಶ್ರೀಶೈಲ ಹುದ್ದಾರ, ಮೂಡಲಪಾಯ ಯಕ್ಷಗಾನ ಕಲಾವಿದ ಮಡಿವಾಳರ ಉಪಸ್ಥಿತರಿದ್ದರು. ಬಸವರಾಜ ಶಿಗ್ಗಾಂವಿ, ವೀರೇಶ ಬಡಿಗೇರ, ಎನ್.ಎಚ್. ನದಾಫ್ ತತ್ವಪದ ಹಾಡಿದರು.
ಸಾವಕ್ಕ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ೤ ಸ.ಚಿ. ರಮೇಶ ಸ್ವಾಗತಿಸಿದರು. ಸಂದರ್ಶಕ ಪ್ರಾಧ್ಯಾಪಕ ಡಾ೤ ಕೆ. ಕಮಲಾಕ್ಷ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಸಂಶೋಧನಾಧಿಕಾರಿ ಡಾ೤ ಕೆ. ಪ್ರೇಮಕುಮಾರ ವಂದಿಸಿದರು. ವಿವಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಎಂ.ಬಿ. ಶ್ವೇತಾ ಸಂಯೋಜಿಸಿದ್ದರು. ಸಂಗಮೇಶ ಎಸ್. ಗಣಿ, ಎಸ್. ಜಯದತ್ತ, ಪ್ರಕಾಶ ಹೊಸಮನಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement