ಕ್ರೀಡಾಕೂಟ: ವೀರಮದಕರಿನಾಯಕ ಶಾಲೆ ಸಾಧನೆ
ರಾಣಿಬೆನ್ನೂರು: ತಾಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಪ್ರೌಢಶಾಲೆಗಳ ಆಶ್ರಯದಲ್ಲಿ, ಗುಪ್ತಾ ಹೈಸ್ಕೂಲಿನ ಮೈದಾನದಲ್ಲಿ ನಡೆದ ಎಚ್ ವಲಯ ಮಂಡಲ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ನಗರದ ವೀರಮದಕರಿನಾಯಕ ಹೆಣ್ಣುಮಕ್ಕಳ ಪ್ರೌಢಶಾಲೆಯ ವಿದ್ಯಾರ್ಥಿನಿಯರು ವಿವಿಧ ಆಟೋಟಗಳಲ್ಲಿ ಜಯಗಳಿಸಿದ್ದಾರೆ.
ಗುಂಪು ಆಟಗಳಾದ ಕಬಡ್ಡಿಯಲ್ಲಿ ಪ್ರಥಮ, ಥ್ರೋಬಾಲ್, ಖೋಖೋದಲ್ಲಿ ದ್ವಿತೀಯ, ವೈಯಕ್ತಿಕ ಆಟಗಳಾದ 800 ಮೀ. ಓಟದಲ್ಲಿ ಶಿಲ್ಪಾ ಮಡಿವಾಳರ ಪ್ರಥಮ, 1500 ಮೀ. ಓಟದಲ್ಲಿ ವನಿತಾ ಭಾರ್ಕಿ ಪ್ರಥಮ, ಶೋಭಾ ಕಟ್ಟಿಮನಿ ದ್ವಿತೀಯ, 3000 ಮೀ. ಓಟದಲ್ಲಿ ಶೋಭಾ ಕಟ್ಟಿಮನಿ ಪ್ರಥಮ, ವನಿತಾ ಭಾರ್ಕಿ ದ್ವಿತೀಯ, ಎತ್ತರ ಜಿಗಿತದಲ್ಲಿ ಪೂಜಾ ಮಣೆಗಾರ ಪ್ರಥಮ, ಗುಂಡು ಎಸೆತದಲ್ಲಿ ಅನಿತಾ ಅಗಡಿ ಪ್ರಥಮ, ತ್ರಿವಿಧ ಜಿಗಿತದಲ್ಲಿ ಶೋಭಾ ಕಟ್ಟಿಮನಿ ದ್ವಿತೀಯ, ವೇಗದ ನಡಿಗೆಯಲ್ಲಿ ರೇಣುಕಾ ಟೋಪಣ್ಣನವರ ದ್ವಿತೀಯ ಸ್ಥಾನ ಪಡೆದಿದ್ದಾರೆ.